ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀನು ಹಿಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸೇರಿ ಯುವಕ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಡ್ಯಾಬೇರಿ ಬಳಿ ನಡೆದಿದೆ.
ಮದಭಾವಿಯ ರೋಹಿತ ಚವ್ಹಾಣ (8), ವಿಜಯ ಚವ್ಹಾಣ (18) ಮೃತಪಟ್ಟವರು.
ರೋಹಿತ ಚವ್ಹಾಣ, ವಿಜಯ ಚವ್ಹಾಣ ಮೀನು ಹಿಡಿಯಲು ಡ್ಯಾಬೇರಿ ಕೆರೆಗೆ ಹೋದ ವೇಳೆ ತುಂಡಾದ ವಿದ್ಯುತ್ ವೈಯರ್ ತಗುಲಿ ಅಸುನೀಗಿದ್ದಾರೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.