ಮೇಷ
ನೀವಿಂದು ಹಣದ ವಿಚಾರದಲ್ಲಿ ಹೆಚ್ಚು ಜಾಗರೂತೆಯಿಂದ ವರ್ತಿಸಬೇಕು. ದಿನವಿಡೀ ಒತ್ತಡ. ಸಂಜೆ ವೇಳೆಗೆ ಅತೀವ ಬಳಲಿಕೆ ಕಾಡುವುದು.
ವೃಷಭ
ಪ್ರೀತಿಪಾತ್ರರ ಜತೆ ಸಣ್ಣ ವಿಷಯಕ್ಕೆ ಕಲಹ. ಇದು ದಿನವಿಡೀ ನಿಮ್ಮ ಮನಸ್ಸು ಕಲಕುವುದು. ಅನಿರೀಕ್ಷಿತ ಖರ್ಚು. ಕೆಲಸವನ್ನು ದಕ್ಷತೆಯಿಂದ ನಿಭಾಯಿಸಿ.
ಮಿಥುನ
ಆತ್ಮವಿಶ್ವಾಸ ಹೆಚ್ಚು. ಕಾರ್ಯದಲ್ಲಿ ಸಫಲತೆ. ಕೆಲವು ವಿಷಯಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಇತರರಿಗೆ ಬಹಿರಂಗ ಮಾಡಬೇಡಿ. ಅದರಿಂದ ನಿಮಗೇ ಹಿನ್ನಡೆ.
ಕಟಕ
ಪ್ರೀತಿಯ ಭಾವವನ್ನು ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಸಕಾರಾತ್ಮಕ ಸ್ಪಂದನೆ ಲಭ್ಯ. ಆರ್ಥಿಕವಾಗಿ ನಿಮಗೆ ಪೂರಕ ದಿನ. ಕಾರ್ಯದಲ್ಲಿ ಯಶಸ್ಸು.
ಸಿಂಹ
ವೃತ್ತಿಯಲ್ಲಿ ಹಲವು ಅವಕಾಶಗಳು. ಅದನ್ನು ಸದುಪಯೋಗ ಮಾಡಿಕೊಳ್ಳಿ. ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಲು ಆಪ್ತರೊಬ್ಬರು ಯತ್ನಿಸುವರು.
ಕನ್ಯಾ
ಎಂದಿಗಿಂತ ವಿಭಿನ್ನ ದಿನ. ವೃತ್ತಿಯಲ್ಲಿ ನಿಮ್ಮ ನಿರ್ಧಾರ ಆರಂಭದಲ್ಲಿ ಹಿನ್ನಡೆ ಕಂಡರೂ ಬಳಿಕ ಯಶ ಕಾಣುವುದು. ಆರೋಗ್ಯಕರ ಆಹಾರ ಮಾತ್ರ ಸೇವಿಸಿರಿ.
ತುಲಾ
ಬಂಧುಗಳ ಜತೆಗಿನ ನಿಮ್ಮ ಸಂಬಂಧ ಹಾಳು ಮಾಡಲು ಕೆಲವರ ಯತ್ನ. ಆದರೆ ಅದು ಫಲ ನೀಡದು. ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳದಿರಿ.
ವೃಶ್ಚಿಕ
ಏನೋ ಕಳಕೊಂಡ ಭಾವನೆ. ಮನಸ್ಸಿನಲ್ಲಿ ಉದಾಸ ಭಾವ. ಆರೋಗ್ಯದ ಚಿಂತೆಯಿದ್ದರೆ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಿ.
ಧನು
ಸಂಬಂಧದ ವಿಚಾರದಲ್ಲಿ ನಾಜೂಕಿನಿಂದ ನಡಕೊಳ್ಳಿ. ಸಣ್ಣ ಮಾತು ಬಂಧುತ್ವ ಹಾಳು ಮಾಡದಂತೆ ಎಚ್ಚರ ವಹಿಸಿರಿ. ಟೀಕೆಗೆ ಕಿವಿಗೊಡಬೇಡಿ.
ಮಕರ
ನಿಮ್ಮ ಉದ್ದೇಶ ಸಾಧಿಸಲು ಇಂದು ಪೂರಕವಾದ ದಿನ. ನೀವು ಬಯಸಿದಂತೆ ಎಲ್ಲ ಕಾರ್ಯ ಸಾಗುವುದು. ಕೌಟುಂಬಿಕ ಸಹಕಾರ.
ಕುಂಭ
ಪ್ರೀತಿಪಾತ್ರರ ಜತೆ ಅಭಿಪ್ರಾಯಭೇದ ಉಂಟಾದೀತು. ಅದರಿಂದ ಮುನಿಸು. ಸಂಯಮದಿಂದ ನಡಕೊಳ್ಳಿ. ಆರೋಗ್ಯ ಸಮಸ್ಯೆ ಸಂಭವ.
ಮೀನ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಹಾಗೆಂದು ಕೆಲಸದ ಮೇಲಿನ ಏಕಾಗ್ರತೆ ಕಳಕೊಳ್ಳದಿರಿ. ಆತ್ಮೀಯರ ಜತೆ ಸಂವಹನದ ಕೊರತೆ, ಭಿನ್ನಮತ.