ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದ್ದಾರೆ.
ಈ ವೇಳೆ ಸಂಜೆ ಸಮಯ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿಯನ್ನು ಕಣ್ತುಂಬಿಕೊಂಡರು.
ಈ ಖುಷಿಯನ್ನು ಹಂಚಿಕೊಂಡ ಅವರು, ‘ಕಾಶಿಯಲ್ಲಿ ಗಂಗಾ ಆರತಿಗೆ ಸಾಕ್ಷಿಯಾಗುವುದು ಮಂತ್ರಮುಗ್ಧಗೊಳಿಸುವ ಅನುಭವವಾಗಿದೆ. ಪವಿತ್ರ ಗಂಗೆಯ ಸೌಂದರ್ಯ, ಸುತ್ತಲೂ ಹೊಳಪು ಮತ್ತು ಭಕ್ತಿಯ ಕ್ಷಣ ವಿಶೇಷವಾಗಿತ್ತು ಎಂದು ಹೇಳಿದರು.