ಹೊಸದಿಗಂತ ವರದಿ, ವಿಜಯಪುರ:
ನೆಹರು ಮಾಡಿದ ದೊಡ್ಡ ಅನಾಹುತ ಅಂದರೆ ಅದು ವಕ್ಫ್ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಏನು ಜಮೀರ್ ನ ಅಪ್ಪಾ ಮಾಡಿದ್ದಾನಾ ? ಈ ದೇಶದಲ್ಲಿ ಇದ್ದ ಅವರಿಗೆ ಪಾಕಿಸ್ತಾನವನ್ನು ಆಗಲೆ ಒಡೆದು ಕೊಟ್ಟಿದೆಯಲ್ಲ ಎಂದರು.
ವಕ್ಫ್ ಎನ್ನುವ ಕರಾಳ ಒಂದು ಕಾನೂನು ತಗೆದುಕೊಂಡು ಬಂದು, ನಮ್ಮ ದೇಶದ 12 ಲಕ್ಷ ಎಕರೆಗಿಂತಲೂ ಹೆಚ್ಚು, ಕರ್ನಾಟಕದಲ್ಲಿ 50 ಸಾವಿರ ಎಕರೆಗೂ ಹೆಚ್ಚು ಜಮೀನು ವಕ್ಫ್ ಗೆ ಸೇರಿಸಿದ್ದಾರೆ. ಹಿಂದುಗಳ ಜಮೀನು ಕೂಡ ವಕ್ಫ್ಗೆ ಸೇರಿಸಿದ್ದಾರೆ ಎಂದು ದೂರಿದರು.
ದಲಿತರು ಕಟ್ಟುವಂತಹ ಮನೆಗಳ ಮೇಲು ವಕ್ಫ್ ಎಂದು ಖಾಲಿ ಮಾಡಿಸಲು ಗೂಂಡಾಗಿರಿ ಮಾಡುತ್ತಿದ್ದಾರೆ. ಈ ವಕ್ಫ್ ಖಾಯ್ದೆಯನ್ನು ದೇಶದಿಂದ ಸಂಪೂರ್ಣವಾಗಿ ಕಿತ್ತು ಹಾಕಬೇಕು. ಆ ಜಮೀನುಗಳನ್ನು ಭಾರತ ಸರ್ಕಾರ ವಾಪಸ್ ಪಡೆದುಕೊಂಡು, ಆಯಾ ರಾಜ್ಯಗಳ ಕಂದಾಯ ಇಲಾಖೆಗೆ ವಕ್ಫ್ ಆಸ್ತಿ ಹಸ್ತಾಂತರ ಮಾಡಬೇಕು. ದಲಿತ, ಹಿಂದುಳಿದ ಹಾಗೂ ವಸತಿ ರಹಿತರಿಗೆ ಮನೆಗಳನ್ನು ಕಟ್ಟಿ ಕೊಡಬೇಕು ಎಂದರು.
ನೆಹರು ಮಾಡಿದ್ದು ದೊಡ್ಡ ತಪ್ಪು ತಿದ್ದಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕಿದೆ. ಹೇಗೆ ಕಾಶ್ಮೀರ್ ದ 370 ನೇ ವಿಧಿ ರದ್ದು ಮಾಡಲಾಯಿತು, ಅಯೋಧ್ಯೆ ಯಲ್ಲಿ ರಾಮಮಂದಿರ ಕಟ್ಟಲಾಯಿತು, ಎಂಟನೂರಾ ಐವತ್ತು ವರ್ಷಗಳ ಹಿಂದೆ ದೊಡ್ಡ ನಳಂದಾ ವಿಶ್ವವಿದ್ಯಾಲಯವನ್ನು ಓರ್ವ ಮುಸ್ಲಿಂ ರಾಜ್ಯ ಸಂಪೂರ್ಣವಾಗಿ ನಾಶಮಾಡಿದಾಗ, ತಿಂಗಳಾನುಗಟ್ಟಲೆ ಎಷ್ಟು ಭವ್ಯ ಗ್ರಂಥಗಳು ಬೆಂಕಿಗೆ ಆಹುತಿಯಾದವು. ಅಂತಹದ್ದನ್ನು ಪ್ರಧಾನಮಂತ್ರಿಯವರು ಮತ್ತೊಮ್ಮೆ ಮರು ನಿರ್ಮಾಣ ಮಾಡಿ, ಜಗತ್ತಿಗೆ ತೋರಿಸುವಂತಹ ಕೆಲಸ ಮಾಡಿದ್ದಾರೆ ಎಂದರು.
ಅದೇ ರೀತಿ, ನಾನು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದು, ಈ ವಕ್ಫ್ ಕಾನುನೂನ್ನು ದೇಶದಿಂದ ರದ್ದು ಮಾಡಬೇಕು. ಇದು ಭಾರತದ ನಾಗರಿಕರ ಆಸ್ತಿ, ಅದು ಯಾರೊಬ್ಬರ ಆಸ್ತಿಯಲ್ಲ ಎಂದರು.
ಮುಸ್ಲಿಂ ರ ಆಸ್ತಿ ಗಾಂಧಿ ಮತ್ತು ನೆಹರು ಪಾಕಿಸ್ತಾನ್ ಅಂತ ಕರಾಳ ದೇಶವನ್ನು ಮಾಡಿಕೊಟ್ಟಿದ್ದಾರೆ. ಅಲ್ಲಿ ಬೇಕಾದರೆ ವಕ್ಫ್ ಮಾಡಿಕೊಳ್ಳಲಿ, ಇಲ್ಲ ಖಬರಿಸ್ಥಾನ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶಿವಾನಂದ ಪಾಟೀಲ್ ಏನು? ಆದಿಲ್ ಶಾಹಿನಾ, ಟಿಪ್ಪು ಸುಲ್ತಾನಾ? ನಾನು ಎಂ ಎಲ್ ಎ ಇದ್ದೆನೆ ನನಗೆ ಎಲ್ಲ ದಾಖಲೆ ನೀಡಬೇಕು ಎಂದರು.
24 ತಾಸಿನಲ್ಲಿ ದಾಖಲಾತಿ ನೀಡಬೇಕಿತ್ತು. ನಾಳೆ ನಾನು ಕಮೀಷ್ನರ್, ಸಚಿವನ ವಿರುದ್ದ ಹಕ್ಕು ಚ್ಯುತಿ ಮಂಡನೆಯನ್ನು ವಿಧಾನ ಸೌಧದಲ್ಲಿ ಮಾಡುತ್ತೇನೆ ಎಂದರು.