ಸಾಮಾಗ್ರಿಗಳು
ಅರ್ಧಕೆಜಿ ಕೋಳಿಗೆ
ಒಂದೂವರೆ ಈರುಳ್ಳಿ
ಒಂದೂವರೆ ಟೊಮ್ಯಾಟೊ
ಎರಡು ಹಸಿಮೆಣಸು
ಶುಂಠಿ ಬೆಳ್ಳುಳ್ಳಿ
ಚಕ್ಕೆ
ಲವಂಗ
ಖಾರದಪುಡಿ
ಸಾಂಬಾರ್ ಪುಡಿ
ಕೊತ್ತಂಬರಿ ಸೊಪ್ಪು
ಪುದೀನಾ
ಗೋಡಂಬಿ, ಗಸಗಸೆ
ಕಾಯಿ
ಮಾಡುವ ವಿಧಾನ
ಬಾಣಲೆಗೆ ಎಣ್ಣೆ, ಚಕ್ಕೆ ಲವಂಗ, ಈರುಳ್ಳಿ, ಗೋಡಂಬಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ, ಅರಿಶಿಣ ಪುಡಿ, ಶುಂಠಿ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ಎಲ್ಲವೂ ಬೆಂದ ನಂತರ ಆಫ್ ಮಾಡಿ ಕಾಯಿ, ಸಾಂಬಾರ್ ಪುಡಿ, ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಪುದೀನ ಕೊತ್ತಂಬರಿ ಸೇರಿಸಿ ಮಿಕ್ಸಿ ಮಾಡಿ
ನಂತರ ಕುಕ್ಕರ್‌ನಲ್ಲಿ ಎಣ್ಣೆ ಚಿಕನ್ ಹಾಕಿ ಬಾಡಿಸಿ
ನಂತರ ಈ ಮಸಾಲಾ ಹಾಕಿ, ಉಪ್ಪು ಹಾಕಿ ವಿಶಲ್ ಕೂಗಿಸಿದ್ರೆ ಚಿಕನ್ ಸಾಂಬಾರ್ ರೆಡಿ