ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಇದರಲ್ಲಿ ವಿಶೇಷವಾಗಿ ಬುಜ್ಜಿಯನ್ನು ಬಳಸಲಾಗುತ್ತಿದೆ.
ಬುಜ್ಜಿ ಎಂದರೆ ಸ್ಟೈಲಿಷ್ ಆಗಿರುವ ಕಾರ್, ಈ ಕಲ್ಕಿಯ ಈ ಬುಜ್ಜಿ ವಾಹನ ಕುಂದಾಪುರಕ್ಕೆ ಬಂದಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿ ಬುಜ್ಜಿಯನ್ನು ಓಡಿಸಿ ಖುಷಿ ಪಟ್ಟಿದ್ದಾರೆ.
ಬುಜ್ಜಿ, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಓಡಿಸುವ ಮೂರು ಚಕ್ರದ ವಾಹನದ ಹೆಸರು. ಭಾರಿ ಬಲಶಾಲಿಯಾಗಿರುವ ಈ ವಾಹನ ಬೃಹತ್ ಗಾತ್ರದಲ್ಲಿದ್ದು, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬುಜ್ಜಿ ನಾಯಕ ಪ್ರಭಾಸ್ರ ವಾಹನ ಮಾತ್ರವಲ್ಲ ಆತ್ಮೀಯ ಗೆಳೆಯ ಸಹ. ಈ ಬುಜ್ಜಿ ವಾಹನವನ್ನು ಪ್ರಭಾಸ್ ಸೇರಿದಂತೆ ಚಿತ್ರರಂಗದ ಹಲವರು ಓಡಿಸಿ ಖುಷಿ ಪಟ್ಟಿದ್ದಾರೆ. ಇದೀಗ ವಾಹನವು ಕುಂದಾಪುರಕ್ಕೆ ಬಂದಿದ್ದು, ನಟ ರಿಷಬ್ ಶೆಟ್ಟಿ ಸಹ ವಾಹನವನ್ನು ಓಡಿಸಿದ್ದಾರೆ.