ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಕಿ 2898 ಎಡಿ ಸಿನಿಮಾಗೆ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ವಿಶ್ವಾದ್ಯಂತ ತಾರೆಯರ ಅಭಿಮಾನಿಗಳು ಸಿನಿಮಾ ಟಿಕೆಟ್ ಬುಕ್ಕಿಂಗ್‌ಗಾಗಿ ಮುಗಿಬಿದ್ದಿದ್ದಾರೆ.
ಜೂನ್ 27ರಂದು ಸಿನಿಮಾ ರಿಲೀಸ್ ಆಗಲಿದ್ದು, ಟಿಕೆಟ್ ಬುಕ್ ಮಾಡುವ ವೇಳೆ ಪ್ರಭಾಸ್ ಅಭಿಮಾನಿಗಳು ದೊಡ್ಡ ಎಡವಟ್ಟೊಂದನ್ನು ಮಾಡಿದ್ದಾರೆ.
2019ರಲ್ಲಿ ಕಲ್ಕಿ ಸಿನಿಮಾ ರಿಲೀಸ್ ಆಗಿದ್ದು, ಇದೀಗ ಅದೇ ಸಿನಿಮಾವನ್ನು ಜೂನ್ 27ರಂದೇ ರೀ ರಿಲೀಸ್ ಮಾಡಲಾಗುತ್ತಿದೆ. ಕಲ್ಕಿ 2898 ಎಡಿ ಸಿನಿಮಾ ಎಂದುಕೊಂಡು ಫ್ಯಾನ್ಸ್ ಕಲ್ಕಿ ಸಿನಿಮಾದ ಆರು ಶೋಗಳಿಗೆ ಟಿಕೆಟ್ ಬುಕ್ ಮಾಡಿ ಹೌಸ್‌ಫುಲ್ ಮಾಡಿದ್ದಾರೆ.
ತೆಲುಗು ನಟ ರಾಜಶೇಖರ್ ನಟನೆಯ ಕಲ್ಕಿ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಟಿಕೆಟ್ನ ಫ್ಯಾನ್ಸ್ ಬುಕ್ ಮಾಡಿದ್ದಾರೆ. ಆ ಬಳಿಕ ಅವರಿಗೆ ತಪ್ಪಿನ ಅರಿವಾಗಿದೆ. ಕಲ್ಕಿ 2898 ಎಡಿ ಸಿನಿಮಾ ರಿಲೀಸ್ ಆಗುತ್ತಿದ್ದು, ಇದರಿಂದ ಲಾಭ ಮಾಡಿಕೊಳ್ಳಲು ರಾಜಶೇಖರ್ ಸಿನಿಮಾ ತಂಡದವರು ಮುಂದಾದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.