ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ವರುಣ್ ಆರಾಧ್ಯ ಅವರ ಬೆಸ್ಟ್ ಫ್ರೆಂಡ್ ತೇಜಸ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದ ತೇಜಸ್ ಮೃತರು. ಕೆಲಸದ ನಿಮಿತ್ತ ತೇಜಸ್ ಹಾಗೂ ಇನ್ನೊಬ್ಬ ಸ್ನೇಹಿತ ಜೊತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ತೇಜಸ್ ಮೃತಪಟ್ಟಿದ್ದಾನೆ. ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೇಜಸ್ ನಿಧನ ಹಿನ್ನೆಲೆಯಲ್ಲಿ ಕಿರುತೆರೆಯ ಹಲವು ನಟರು ಕಂಬನಿ ಮಿಡಿಯುತ್ತಿದ್ದಾರೆ.