ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಎಲ್ಲಿ ಕಳಪೆ ಗುಣಮಟ್ಟದ ರಸ್ತೆಗಳಿರುತ್ತೋ ಅಲ್ಲಿ ವಾಹನಗಳ ಮಾಲೀಕರಿಗೆ ಹೆದ್ದಾರಿ ಅಧಿಕಾರಿಗಳು ಟೋಲ್ ಶುಲ್ಕ ವಿಧಿಸಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್ಗಳನ್ನು ಅಳಡಿಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಅವಸರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಿದರೆ ಮಾತ್ರ ಬಳಕೆದಾರ ಶುಲ್ಕ ವಿಧಿಸಬೇಕು. ಗುಂಡಿಗಳು ಮತ್ತು ಮಣ್ಣಿನಿಂದ ಕೂಡಿದ ರಸ್ತೆಗಳಲ್ಲಿ ನೀವು ಟೋಲ್ ವಿಧಿಸಿದರೆ, ಜನರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ರಸ್ತೆ ಮತ್ತು ಸಾರಿಗೆ ಸಚಿವರು ಹೇಳಿದ್ದಾರೆ.
ಟೋಲ್ ಸಂಗ್ರಹಣೆಗೆ ಹೊಸ ವ್ಯವಸ್ಥೆ ಹೇಗೆ?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಎನ್‌ಎಸ್‌ಎಸ್ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್‌ಗೆ (ಇಟಿಸಿ) ಮುಂದಾಗಿದೆ. ಫಾಸ್ಟ್ಟ್ಯಾಗ್ ವ್ಯವಸ್ಥೆಯನ್ನೇ ಶುಲ್ಕ ಸಂಗ್ರಹಕ್ಕೆ ಬಳಸಿಕೊಳ್ಳಲಿದೆ.ಆರಂಭಿಕ ಹಂತದಲ್ಲಿ ಫಾಸ್ಟ್ಟ್ಯಾಗ್ ವ್ಯವಸ್ಥೆ ಬಳಸಿಕೊಂಡೇ ಜಿಎನ್‌ಎಸ್‌ಎಸ್-ಇಟಿಸಿ ವ್ಯವಸ್ಥೆ ಜಾರಿಯಾಗಲಿದೆ. (ರೇಡಿಯೊ ಪ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಮತ್ತು ಹೊಸ ವ್ಯವಸ್ಥೆ ಎರಡೂ ಜಾರಿಯಲ್ಲಿ ಇರಲಿವೆ. ಮೊದಲಿಗೆ ವಾಣಿಜ್ಯ ವಾಹನಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಬಳಿಕ ಖಾಸಗಿ ವಾಹನಗಳಿಗೆ ಈ ಸೇವೆ ವಿಸ್ತರಿಸಲು ಪ್ರಾಧಿಕಾರವು ನಿರ್ಧರಿಸಿದೆ.