FACT | ಏಲಕ್ಕಿಯಿಂದ ಇಷ್ಟೆಲ್ಲಾ ಪ್ರಯೋಜನ ಇರುತ್ತಾ? ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಏಲಕ್ಕಿ!

ಏಲಕ್ಕಿ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಖಿನ್ನತೆ ಮತ್ತು ಒತ್ತಡದಂತಹ ಸಮಸ್ಯೆಗಳಿಗೆ ಏಲಕ್ಕಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಏಲಕ್ಕಿ ಮಾನಸಿಕ ಸಮಸ್ಯೆಗಳನ್ನು ಕ್ರಮೇಣ ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುವ ಸಾಮರ್ಥ್ಯ ಹೊಂದಿದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಏಲಕ್ಕಿಯಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ರಕ್ತದೊತ್ತಡ ಸಮಸ್ಯೆಗಳಿಗೆ ಇದು ಉಪಯುಕ್ತವಾಗಿದೆ.

ರೋಗನಿರೋಧಕ ಶಕ್ತಿ: ದೇಹವನ್ನು ಫ್ರೀ ರ್ಯಾಡಿಕಲ್ ಸೆಲ್ಸ್ನಿಂದ ರಕ್ಷಿಸುತ್ತದೆ. ಜೀವಸತ್ವಗಳು ಮತ್ತು ಸಾರಭೂತ ತೈಲಗಳ ಸಮೃದ್ಧಿಯಿಂದ ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಸುಲಭ ಜೀರ್ಣಕ್ರಿಯೆ. ನಮ್ಮ ಮನಸ್ಥಿತಿ ಕೂಡ ನಮ್ಮ ಜೀರ್ಣಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾದರೆ ನಮ್ಮ ಆಲೋಚನೆಗಳಲ್ಲಿ ವ್ಯತ್ಯಾಸವಾಗುತ್ತದೆ. ಏಲಕ್ಕಿಯು ಜೀರ್ಣಕ್ರಿಯೆಗೆ ಅಗತ್ಯವಾದ ರಸವನ್ನು ಒದಗಿಸುತ್ತದೆ. ಉಬ್ಬುವುದು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಖಿನ್ನತೆ ಮತ್ತು ಆತಂಕವನ್ನು ನಿವಾರಿಸುತ್ತದೆ: ನೀವು ಅತಿಯಾದ ಒತ್ತಡ, ಖಿನ್ನತೆ ಅಥವಾ ಆತಂಕವನ್ನು ಅನುಭವಿಸಿದಾಗ ಒಂದು ಕಪ್ ಏಲಕ್ಕಿ ಚಹಾವನ್ನು ಕುಡಿಯಿರಿ. ಕೊರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ತಾಜಾತನವನ್ನು ಕೂಡ ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!