ದರ್ಶನ್‌ ನೋಡಲು ಜೈಲಿಗೆ ಬಂದ ತಾಯಿ, ಅಮ್ಮನನ್ನು ನೋಡಿದ ತಕ್ಷಣ ಡಿಬಾಸ್‌ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಜೈಲಿಗೆ ಬರೀ ಕುಟುಂಬದವರಿಗೆ ಬರುವಂತೆ ದರ್ಶನ್‌ ಹೇಳಿದ್ದರು. ಇದೀಗ ತಾಯಿ ಮೀನಾ, ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್‌ ಜೈಲಿಗೆ ಭೇಟಿ ನೀಡಿದ್ದಾರೆ.

ಇಂದು ಬೆಳಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಮಾಧ್ಯಮಗಳ ಕಣ್ಣು ತಪ್ಪಿಸಲು ಖಾಸಗಿ ವಾಹನದಲ್ಲಿ ಬಂದ ದರ್ಶನ್ ಕುಟುಂಬ ಜೈಲಿನ ಒಳಗೆ ಹೋಗಿ ಭೇಟಿ ಮಾಡಿದೆ. ಮಗನ ಸ್ಥಿತಿ ನೋಡ್ತಿದ್ದಂತೆ ತಾಯಿ ಮೀನಾ ತೂಗುದೀಪ್ ಭಾವುಕರಾಗಿದ್ದಾರೆ. ತಾಯಿಯನ್ನು ಕಂಡು ದರ್ಶನ್‌ ಕೂಡ ಕಣ್ಣೀರಿಟ್ಟಿದ್ದಾರೆ.
ದರ್ಶನ್‌ಗೆ ಸಹೋದರ ದಿನಕರ್ ಧೈರ್ಯ ತುಂಬಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕೆ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!