ಹೊಸದಿಗಂತ ವರದಿ,ಮೈಸೂರು:
ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುವ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಡಿಸಿಎಂ ಸ್ಥಾನ ಕೂಡ ಖಾಲಿ ಇಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
ಅನಗತ್ಯ ಹೇಳಿಕೆ ನೀಡಿದರೆ ಸಚಿವರಿಗೆ ನೊಟೀಸ್ ನೀಡುತ್ತೇವೆ ಎಂಬ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ವಿನಯ್ ಕುಲಕರ್ಣಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಸಿಎಂ ವಿಚಾರ ಸೇರಿ ಅನಗತ್ಯ ಹೇಳಿಕೆ ಕೊಡಬಾರದು ಅಂತ ಹೈಕಮಾಂಡ್ ಹೇಳಿರಬಹುದು. ಹೀಗಾಗಿ ಈ ರೀತಿ ಹೇಳಿರಬಹುದು ಎಂದರು.