ಬಸ್ ಹತ್ತುವ ವೇಳೆ ಮಹಿಳೆ ಕತ್ತಿನಿಂದ ಚಿನ್ನದ ಮಾಂಗಲ್ಯ ಸರ ದೋಚಿಕೊಂಡ ಕಳ್ಳರು

ಹೊಸದಿಗಂತ ವರದಿ,ಮೈಸೂರು:

ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ದೆಗ್ಗನಹಳ್ಳಿ ಗ್ರಾಮದ ಶಾರದಮ್ಮ ಎಂಬವರು ತಮ್ಮ ಪುತ್ರಿಯೊಡನೆ ಕೆ.ಆರ್.ನಗರ ಬಸ್ ನಿಲ್ದಾಣದಿಂದ ಕೆಸ್ತೂರು ಗೇಟ್‌ಗೆ ಹೋಗಲು ಎರೆಮನುಗನಹಳ್ಳಿ ಬಸ್ ಹತ್ತಿದ ನಂತರ ಮಾಂಗಲ್ಯ ಸರ ಕಳವಾಗಿರುವ ವಿಚಾರ ತಿಳಿದು ಆಕೆ ಕೂಗಿಕೊಂಡರಾದರೂ ಅಷ್ಟರಲ್ಲಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದರು.ಕೂಡಲೇ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದರೂ ಕಳ್ಳರು ಪತ್ತೆಯಾಗಿಲ್ಲ.

ಘಟನೆ ಸಂಬoಧ ಪೊಲೀಸ್ ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!