ರೀಲ್ಸ್ ಶೋಕಿದಾರನಿಗೆ ಪರಪ್ಪನ ಅಗ್ರಹಾರದ ದಾರಿ ತೋರಿಸಿದ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮೈಮೇಲೆ ಕೆಜಿಗಟ್ಟಲೆ ಚಿನ್ನವನ್ನು ಧರಿಸಿ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾ, ಇಬ್ಬರು ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಶೋಕಿಗಾಗಿ ರೀಲ್ಸ್ ಮಾಡುತ್ತಿದ್ದವನನ್ನು ಬೆಂಗಳೂರು ಪೊಲೀಸರು ಜೈಲಿಗೆ ಕಳಿಸಿ ಕಂಬಿ ಎಣಿಸಲು ಬಿಟ್ಟಿದ್ದಾರೆ.

ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಶೋಕಿ ಮಾಡುತ್ತಿದ್ದವನು ಈಗ ಬೆಂಗಳೂರಿಗೂ ಬಂದಿದ್ದಾನೆ. ಈತನ ಶೋಕಿ ರೀಲ್ಸ್ ನೋಡಿದ ಬೆಂಗಳೂರಿನ ಖಾಕಿ ಪಡೆ ನಕಲಿ ಶೋಕಿದಾರನನ್ನು ಹೆಡೆಮುರಿಕಟ್ಟಿ ಜೈಲಿಗೆ ಹಾಕಿದ್ದಾರೆ.

ಗನ್ ಮ್ಯಾನ್, ದುಬಾರಿ ಕಾರುಗಳು, ಬಾಡಿಗಾರ್ಡ್ಸ್ ವಿತ್ ವೆಪನ್ ಶೋಕಿ ಮಾಡುವುದು ಈತನ ಖಯಾಲಿಯಾಗಿದೆ. ಮೈಮೇಲೆ ಕೆಜಿಗಟ್ಟಲೆ ಚಿನ್ನಾಭರಣ ಹಾಕಿಕೊಂಡು ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿದ್ದ ರೀಲ್ಸ್ ಸ್ಟಾರ್ ಜೈಲು ಸೇರಿದ್ದಾನೆ. ಬೆಂಗಳೂರು ಪೊಲೀಸರು ರೀಲ್ಸ್ ಸ್ಟಾರ್ ಅರುಣ್ ಕಟಾರೆ ಎಂಬುವನನ್ನು ಬಂಧಿಸಿದ್ದಾರೆ.

ಕೊತ್ತನೂರು ಪೊಲೀಸರಿಂದ ಅರುಣ್ ಕಟಾರೆ ಬಂಧನವಾಗಿದೆ. ಎಕೆ 47 ಮಾದರಿಗೆ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್ ಮಾಡಿದ್ದಾರೆ. ಅರುಣ್ ಕಟಾರೆ ಶೋ ಅಪ್‌ಗೆ ಬೆದರಿದ ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ವಿವಿಧೆಡೆ ಮೇಲಿಂದ ಮೇಲೆ ಈ ರೀತಿಯಲ್ಲಿ ಶೋ ಅಪ್ ಕೊಡುತ್ತಿದ್ದವನ ಬಗ್ಗೆ ಮಾಹಿತಿ ಬೆಂಗಳೂರು ನಿವಾಸಿಗಳು ರೌಡಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಸ್ಥಳೀಯ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅರುಣ್ ಕಟಾರೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇದು ನಕಲಿ ಗನ್ ಎಂದು ಬಾಯಿ ಬಿಟ್ಟಿದ್ದಾನೆ. ಇನ್ನು ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ರೀಲ್ಸ್ ಸ್ಟಾರ್ ಅರುಣ್ ವಿರುದ್ಧ ಆರ್ಮ್ಸ್ ಕಾಯ್ದೆ 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದು, ರೀಲ್ಸ್ ಶೋಕಿಗೆ ಬಿದ್ದು ಪರಪ್ಪನ ಅಗ್ರಹಾರ ಸೇರಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!