ಹೊಸದಿಗಂತ ವರದಿ,ಅಂಕೋಲಾ:
ಹುಬ್ಬಳ್ಳಿ- ಅಂಕೋಲಾ ಬ್ರಾಡ್ಗೇಜ್ ರೈಲ್ವೆ ಮಾರ್ಗ ಡಬಲ್ ಲೈನ್ ವಿದ್ಯುದೀಕರಣ ಕಾಮಗಾರಿಗೆ ಅನುಮೋದನೆ ನೀಡುವಂತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದರು.
ಸಚಿವ ಸೋಮಣ್ಣ ಅವರಿಗೆ ಭೇಟಿ ಮಾಡಿದ ಸಂಸದ ಕಾಗೇರಿ ಉತ್ತರ ಕನ್ನಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಿಂದ ಆಗಬೇಕಾದ ಕಾರ್ಯಗಳ ಕುರಿತು ಸಚಿವರಿಗೆ ಮನವಿ ಮಾಡಿದ್ದಾರೆ.
ತಾಳಗುಪ್ಪ ಬೆಂಗಳೂರು ಮೈಸೂರು ರೈಲಿಗೆ ಮಲ್ಲೇಶ್ವರಂದಲ್ಲಿ ನಿಲುಗಡೆ ಕಲ್ಪಿಸುವುದು, ಬೆಂಗಳೂರು ಮುರುಡೇಶ್ವರ ಎಕ್ಸ್ ಪ್ರೆಸ್ ರೈಲಿನ ಸಂಚಾರವನ್ನು ಗೋವಾದ ವಾಸ್ಕೋ ವರೆಗೆ ಮುಂದುವರಿಸುವಂತೆ ಸಂಸದರು ಮನವಿ ಮಾಡಿದ್ದಾರೆ.
ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ಗೋವಾ ಎಕ್ಸ್ ಪ್ರೆಸ್, ಬೆಳಗಾವಿ ಎಕ್ಸ್ ಪ್ರೆಸ್, ಕೆ.ಎಸ್. ಆರ್. ಬೆಂಗಳೂರು ಎಕ್ಸ್ ಪ್ರೆಸ್, ದಾದರ್ ಸೆಂಟ್ರಲ್ ಎಕ್ಸ್ ಪ್ರೆಸ್, ಹಾಗೂ ಎಸ್. ಎಸ್. ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆ ಆಗಬೇಕು, ಧಾರವಾಡದಿಂದ ದಾಂಡೇಲಿಗೆ ರೈಲು ಸೇವೆ ಪುನರಾರಂಭ ಆಗಬೇಕು, ತಾಳಗುಪ್ಪ ಶಿರಸಿ ಹುಬ್ಬಳ್ಳಿ ಲೈನ್ ಎಫ್.ಎಲ್. ಎಸ್ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಸಹ ಸಂಸದ ಕಾಗೇರಿ ರೈಲ್ವೆ ರಾಜ್ಯ ಸಚಿವರಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದಿಸಿರುವ ಸಚಿವ ಸೋಮಣ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿರುವುದಾಗಿ ಸಂಸದ ಕಾಗೇರಿ ತಿಳಿಸಿದ್ದಾರೆ.
ಮೊದಲು ಹಿಂದೆ ಘೋಷಣೆ ಆದ ಗದಗ -ಯಲವಿಗಿ ಸೇರಿದಂತೆ ಗದಗ ಜಿಲ್ಲೆಯ ರೈಲ್ವೇ ಯೋಜನೆ ಶೀಘ್ರ ಜಾರಿಗೆ ತರಲು ಯತ್ನಿಸಿ
ಹುಬ್ಬಳ್ಳಿಯಿಂದ ಅಂಕೋಲಕ್ಕೆ ಈಗ ರೈಲು ಮಾರ್ಗ ಇದೆಯಾ? ಇಲ್ಲದ ರೈಲು ಮಾರ್ಗದ ವಿಧ್ಯುತೀಕರಣ ಹೇಗೆ ಸಾಧ್ಯ?