ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮುಕ್ತಿನಾಥ ದೇಗುಲಕ್ಕೆ ತೆರಳುತ್ತಿದ್ದ ಕನ್ನಡಿಗ ಯಾತ್ರಾರ್ಥಿಗಳು ರಸ್ತೆ ಮಧ್ಯೆ ಸಿಲುಕಿಕೊಂಡಿದ್ದಾರೆ.
ನೇಪಾಳದಲ್ಲಿ ಭಾರೀ ಮಳೆಗೆ ಗುಡ್ಡದ ಮೇಲಿನ ಬಂಡೆಗಳು ಕುಸಿದಿವೆ. ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಐವತ್ತು ಯಾತ್ರಾರ್ಥಿಗಳು ನೇಪಾಳದ ಮುಕ್ತಿನಾಥ ದೇವಸ್ಥಾನಕ್ಕೆ ತೆರಳಿದ್ದರು. ನೇಪಾಳದ ಪ್ರೋಕ್ರಾದಿಂದ ಮುಕ್ತಿನಾಥ ದೇವಾಲಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು ಭೂಕುಸಿತದಿಂದ ಸಿಲುಕಿಕೊಂಡಿದ್ದಾರೆ.
ಭಾರೀ ಮಳೆಗೆ ಗುಡ್ಡ ಕುಸಿದು ಕಾರು ಪಲ್ಟಿಯಾಗಿದೆ. ಯಾತ್ರಿಕರು 11 ದಿನಗಳ ಪ್ರಯಾಣವನ್ನು ಪ್ರಾರಂಭಿಸಿದರು. ಎಲ್ಲಾ ಕನ್ನಡಿಗರು ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ರಕ್ಷಣಾ ತಂಡಗಳು ಎಲ್ಲಾ ಕನ್ನಡಿಗ ಯಾತ್ರಾರ್ಥಿಗಳನ್ನು ರಕ್ಷಿಸಿವೆ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆಡಂಬರದ ಭಕ್ತಿ ಏಕಿರಬೇಕು.ಅತಿಯಾದರೆ ಅಮೃತವೂ ಅಡ್ಡ ಪರಿಣಾಮಗಳನ್ನು ತರಬಹುದು.