ಹೊಸದಿಗಂತ ಹೊನ್ನಾವರ:
ನಿರಂತರ ಸುರಿಯುವ ಮಳೆಗೆ ಪಟ್ಟಣದ ಕರ್ನಲ್ ಹಿಲ್ ಬಳಿ ರಾ.ಹೆ66 ರಸ್ತೆಯಲ್ಲಿ ಬೃಹತ್ ಗಾತ್ರದ ಬಂಡೆ ಉರುಳಿದ್ದು ವಾಹನ ಸಂಚಾರದಲ್ಲಿ ವ್ಯತ್ಯಯುಂಟಾಗಿದೆ.
ಪೋಲಿಸರು ವಾಹನಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದು. ಬಂಡೆ ತೆರವು ಕಾರ್ಯಾಚರಣೆ ಭರದಿಂದ ನಡೆದಿದೆ. ಶೀಘ್ರ ಬಂಡೆ ತೆಗೆದು ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.