ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್ ಗಳ​ ಭರ್ಜರಿ ಗೆಲುವು: ಸರಣಿಯಲ್ಲಿ 1-1 ಸಮಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 100 ರನ್​ ಭರ್ಜರಿ ವಿಜಯ ದಾಖಲಿಸಿದೆ. ಈ ಮೂಲಕ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧನೆ ಮಾಡಿದೆ.

ಹರಾರೆ ಸ್ಪೋರ್ಟ್ಸ್​​ ಕ್ಲಬ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 234 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಆತಿಥೇಯ ಜಿಂಬಾಬ್ವೆ ಬಳಗ 18. 4 ಓವರ್​ಗಳಲ್ಲಿ 134 ರನ್​ಗಳಿಗೆ ಆಲ್​ಔಟ್ ಆಯಿತು.

ಇನ್ನೋಸೆಂಟ್​ ಕೈಯಾ 4 ರನ್ ಬಾರಿಸಿ ಮುಕೇಶ್ ಎಸೆತಕ್ಕೆ ಔಟಾದರು. ಆದರೆ, ಅ ಬಳಿಕ ವೆಸ್ಲಿ ಮಧೆವೆರೆ (43 ರನ್​) ಹಾಗೂ ಬ್ರಿಯಾನ್ ಬೆನೆಟ್ (26 ರನ್​) ಭಾರತದ ಬೌಲರ್​ಗಳನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಬ್ರಿಯಾನ್ ಮುಕೇಶ್ ಎಸೆತಕ್ಕೆ ಔಟಾದ ಬಳಿಕ ಡಿಯಾನ್ ಮೈರ್ಸ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಸಿಕಂದರ್​ ರಾಜಾ 4 ರನ್​ಗೆ ಔಟಾದರು. ಇವರಿಬ್ಬರೂ ಆವೇಶ್​ ಖಾನ್​ ಬೌಲಿಂಗ್​ಗೆ ಬಲಿಯಾದರು. ಇದಾದ ಬಳಿಕ ಜಿಂಬಾಬ್ವೆ ಆಟಗಾರರ ಪ್ರತಾಪ ಕಡಿಮೆಯಾಯಿತು. ಕ್ಯಾಂಪ್​ಬೆಲ್​ 10 ರನ್​, ಮಂಡಂಡೆ ಶೂನ್ಯಕ್ಕೆ ಹಾಗೂ ಮಸಕಡ್ಸಾ 1 ರನ್​ಗೆ ಔಟಾಗುವ ಮೂಲಕ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಲ್ಯೂಕ್​ ಲ್ಯಾಂಗ್​ವೇ ಕೊನೆಯಲ್ಲಿ 33 ರನ್ ಬಾರಿಸಿದರೂ ಭಾರತದ ರನ್​ ಮೊತ್ತವನ್ನು ಸಮೀಪಿಸಲೂ ಅವರಿಗೆ ಸಾಧ್ಯವಾಗಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!