ಈಗಿನ ವಾತಾವರಣಕ್ಕೆ ಸಂಜೆಗೆ ಕಾಫಿ ಜೊತೆಗೆ ಬಜ್ಜಿ, ಫ್ರೆಂಚ್ ಫ್ರೈಸ್, ಬೋಂಡಾ, ಹಪ್ಪಳ, ಸಂಡಿಗೆ ಏನಾದ್ರೂ ಒಂದು ಬೇಕೇ ಬೇಕು. ಆದರೆ ಇದನ್ನು ಕರಿದ ಎಣ್ಣೆಯನ್ನು ಏನು ಮಾಡ್ತೀರಾ?
ಮತ್ತೆ ಡಬ್ಬಿಗೆ ಹಾಕಿ ಮರುದಿನ ಮಾಮೂಲಿಯಂತೆ ಬಳಕೆ ಮಾಡ್ತೀರಾ? ಹಾಗಿದ್ರೆ ಇದನ್ನು ಮಿಸ್ ಮಾಡದೇ ಓದಿ..
ಈ ರೀತಿ ಡೀಪ್ಫ್ರೈ ಮಾಡಿದ ಎಣ್ಣೆಯನ್ನ ಮರುಬಳಕೆ ಮಾಡಬೇಡಿ, ಮಾಡುವುದೇ ಆದರೆ 24 ಗಂಟೆಯೊಳಗೆ ಬಳಸಿ, ಇಲ್ಲವಾದರೆ ಅದನ್ನು ಎಸೆದುಬಿಡಿ. ಇದರಲ್ಲಿ ಯಾವುದೇ ನ್ಯೂಟ್ರೀಷನ್ ಇರುವುದಿಲ್ಲ. ಇದಕ್ಕೇ ಅಲ್ವಾ ರಸ್ತೆ ಬದಿಯ ಕರಿದ ಪದಾರ್ಥಗಳಿಗೆ ಬ್ರೇಕ್ ಹಾಕೋಕೆ ಹೇಳೋದು.