ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಸಾವು, ಗುರುತಿಗಾಗಿ ಪ್ರಕಟಣೆ ಹೊರಡಿಸಿದ ಪೊಲೀಸ್‌

ದಿಗಂತ ವರದಿ ಮಂಡ್ಯ :

ಅಪರಿಚಿತ ಯುವಕನೋರ್ವ ರೈಲಿನ ಚಕ್ರಕ್ಕೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ರೈಲು ನಿಲ್ದಾಣದ ಬಳಿ ನಡೆದಿದೆ.

ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ಯುವಕ ಚಲಿಸುತ್ತಿದ್ದ ರೈಲಿಗೆ ಅಡ್ಡಲಾಗಿ ಮಲಗಿದ್ದಾನೆ. ಈತನ ಶರೀರದ ಮೇಲೆ ರೈಲು ಹರಿದ ಪರಿಣಾಮ ಆತನ ರುಂಡ-ಮುಂಡ ಹಾಗೂ ಕೈಗಳು ಬೇರ್ಪಟ್ಟಿವೆ.
ಸುಮಾರು 5.7 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಕೂದಲು, 1 ಇಂಚು ಉದ್ದದ ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾನೆ.

ನೀಲಿ ಮತ್ತು ಬೂದು ಬಣ್ಣದ ಚೆಕ್ಸ್‌ಗಳುಳ್ಳ ತುಂಬು ತೋಳಿನ ಶರ್ಟ್, ಡಾಲರ್ ಕಂಪನಿಯ ಕಂದು ಬಣ್ಣದ ಅಂಡರ್‌ವೇರ್, ಹಸಿರು ಬಣ್ಣದ ನೈಟ್ ಪ್ಯಾಂಟ್, ಒಂದು ಜೊತೆ ಬಿಳಿ ಮತ್ತು ನೀಲಿ ಬಣ್ಣದ ಪಟ್ಟಿಯುಳ್ಳ ಚಪ್ಪಲಿ ಧರಿಸಿದ್ದಾನೆ.

ಈತನ ವಾರಸುದಾರರು ಇದ್ದಲ್ಲಿ ತಕ್ಷಣ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಅಥವಾ ಮೊಬೈಲ್ ನಂ. 9480802122 ಸಂಖ್ಯೆಗೆ ಕರೆ ಮಾಡುವಂತೆ ರೈಲ್ವೇ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!