ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಹಾರ್ದಿಕ್ ಫೋಟೊ ಒಂದು ವೈರಲ್ ಆಗಿದೆ.
ಅಂಬಾನಿ ವೆಡ್ಡಿಂಗ್‌ನಲ್ಲಿ ನತಾಶ ಮತ್ತೊಬ್ಬ ಹುಡುಗನ ಜತೆ ಗ್ರ್ಯಾಂಡ್ ಎಂಟ್ರಿ ನೀಡಿದ್ದರು. ಆತ ನತಾಶ ಬಾಯ್‌ಫ್ರೆಂಡ್ ಎಂದು ಕೂಡ ಹೇಳಲಾಗಿತ್ತು. ಆದರೆ ಇದೀಗ ಹಾರ್ದಿಕ್ ಕೂಡ ಸುಂದರಿಯೊಬ್ಬಳ ಜತೆ ಕಾಣಿಸಿಕೊಂಡಿದ್ದಾರೆ.
ಸದಾ ಸಪ್ಪಗೆ ಫೋಟೊಗೆ ಪೋಸ್ ನೀಡುತ್ತಿದ್ದ ಹಾರ್ದಿಕ್ ಈ ಹುಡುಗಿಯ ಜತೆ ಫುಲ್ ನಗುತ್ತಾ ಪೋಸ್ ನೀಡಿದ್ದಾರೆ. ಈ ಸುಂದರಿ ಜತೆ ಡೇಟಿಂಗ್ ನಡೆಸುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.
ಈ ಸುಂದರಿ ಪ್ರಸಿದ್ಧ ಮೇಕಪ್ ಕಲಾವಿದೆ. ಹೆಸರು ಪ್ರಾಚಿ ಸೋಲಂಕಿ. ಪ್ರಾಚಿ ತಮ್ಮ ಪ್ರಾಚಿ, ಡಿಜಿಟಲ್ ಕ್ರಿಯೇಟರ್. ಆದರೆ ಅವರ ಅದೊಂದು ಪೋಸ್ಟ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈಕೆ ಪಾಂಡ್ಯ ಜತೆ ಡೇಟಿಂಗ್‌ನಲ್ಲಿಲ್ಲ, ಬಟ್ ಪಾಂಡ್ಯ ಅಭಿಮಾನಿ ಅನ್ನೋ ವಿಷಯ ಸದ್ಯಕ್ಕೆ ಹೊರಬಂದಿದೆ.