ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಘಟ್ಟ ಹಾಗೂ ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ತುಂಗಾ ನದಿಯ ನೀರಿನ ಮಟ್ಟವು ಅಪಾಯಕಾರಿ ಮಟ್ಟವನ್ನು ಮೀರಿದೆ, ಇದರಿಂದಾಗಿ ನದಿ ನೀರು ರಸ್ತೆಗಳ ಮೇಲೆ ಹರಿಯುತ್ತದೆ.
ಇದರಿಂದ ಶೃಂಗೇರಿ ಶಾರದಾ ಮಠದ ನಡುವಿನ ಪ್ಯಾರಲ್ ರಸ್ತೆ ಜಲಾವೃತಗೊಂಡಿದೆ. ಪ್ಯಾರಲ್ ಮಾರ್ಗ, ಗಾಂಧಿ ಮೈದಾನ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ತುಂಗಾ ನದಿ ದಂಡೆಯ ನರಸಿಂಹವನ ಬಳಿಯ ಶೃಂಗೇರಿ ಶಾರದಾ ಮಠದ ಸಂಧ್ಯಾವಂದನ ಮಂಟಪವೂ ಜಲಾವೃತಗೊಂಡಿದೆ. ಸಂಧ್ಯಾವಂದನ ಮಂಟಪ ಸಂಪೂರ್ಣ ಜಲಾವೃತಗೊಂಡು 3 ಅಡಿ ಮಾತ್ರ ಬಾಕಿ ಉಳಿದಿದೆ. ವಿಶೇಷ ದಿನಗಳಲ್ಲಿ ಶೃಂಗೇರಿ ಜಗದ್ಗುರು ಸಂಧ್ಯಾವಂದನ ಮಂಟಪದಲ್ಲಿ ಸಂಧ್ಯಾವಂದನೆ ನಡೆಸುತ್ತಾರೆ.