ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬಳು ನಿಯಂತ್ರಣ ತಪ್ಪಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮೃತ ಮಹಿಳೆಯನ್ನು ನಾಗಿನಾ ದೇವಿ ಎಂದು ಗುರುತಿಸಲಾಗಿದ್ದು, ಈಕೆ ಡೊಂಬಿವಲಿಯಲ್ಲಿರುವ ಗ್ಲೋಬ್ ಸ್ಟೇಟ್ ಬಿಲ್ಡಿಂಗ್ ಕಾಂಪ್ಲೆಕ್ಸ್‌ನ ಕ್ಲೀನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಮಧ್ಯಾಹ್ನ 2.40 ರ ಸುಮಾರಿಗೆ, ವಿರಾಮದ ಸಮಯದಲ್ಲಿ ಕಟ್ಟಡದ ಮೂರನೇ ಮಹಡಿಯಲ್ಲಿನ ಮೆಟ್ಟಿಲುಗಳ ಬಳಿ ನಾಗಿನಾ ಕುಳಿತಿರುವುದು ಕಂಡುಬಂದಿದೆ.
ಸಹೋದ್ಯೋಗಿಗಳೊಂದಿಗೆ ನಗುತ್ತಾ ಹಿಡಿತ ತಪ್ಪಿ ಅಲ್ಲಿಂದ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅವಳ ಜೊತೆಗೆ ಅವಳ ಹಿಂದೆಯಿದ್ದ ವ್ಯಕ್ತಿ ಕೂಡ ಬಿದ್ದಿದ್ದು, ಆದರೆ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಿದ್ದಿರುವುದು ಅನುಮಾನಾಸ್ಪದ.