ಸಾಮಾಗ್ರಿಗಳು
ಚಕ್ಕೆ
ಲವಂಗ
ಮರಾಠಿ ಮೊಗ್ಗು
ಏಲಕ್ಕಿ
ಕೊತ್ತಂಬರಿ ಕಾಳು
ಜೀರಿಗೆ
ಒಣಮೆಣಸು
ಈರುಳ್ಳಿ ಪೇಸ್ಟ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಚಿಕನ್
ಉಪ್ಪು
ಮಾಡುವ ವಿಧಾನ
ಚಕ್ಕೆ ಲವಂಗ ಮರಾಠಿ ಮೊಗ್ಗು ಏಲಕ್ಕಿ ಕೊತ್ತಂಬರಿ ಕಾಳು ಜೀರಿಗೆ ಒಣಮೆಣಸು ರುಬ್ಬಿ ಪುಡಿಮಾಡಿಕೊಳ್ಳಿ
ಮೊದಲು ಬಾಣಲೆಗೆ ಎಣ್ಣೆ ಹಾಗೂ ಈರುಳ್ಳಿ ಪೇಸ್ಟ್ ಹಾಕಿ ಬಾಡಿಸಿ, ಹಸಿಮೆಣಸಿನ ಪೇಸ್ಟ್ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೂ ಬಾಡಿಸಿ
ನಂತರ ಅದಕ್ಕೆ ಚಿಕನ್ ಉಪ್ಪು ಅರಿಶಿಣ ಹಾಕಿ ಮಿಕ್ಸ್ ಮಾಡಿ
ನಂತರ ರುಬ್ಬಿದ ಪುಡಿ ಹಾಕಿ
ಆಮೇಲೆ ನೀರು ಹಾಕಿ ಕುದಿಸಿ
ನಂತರ ನೀರು ಕಡಿಮೆಯಾದಂತೆ ಮತ್ತೆ ಸ್ವಲ್ಪ ಪುಡಿ ಹಾಕಿ ಮಿಕ್ಸ್ ಮಾಡಿ ಎಣ್ಣೆ ಬಿಡುವವರೆಗೂ ಡ್ರೈ ಮಾಡಿಕೊಂಡ್ರೆ ಚಿಕನ್ ರೆಡಿ