ಮಹಿಳೆಯರ ಏಷ್ಯಾ ಕಪ್​: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ 7 ವಿಕೆಟ್​ ವಿಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರ ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧ ಗೆದ್ದು ಸಂಭ್ರಮಿಸಿದೆ.

ಡಂಬಲಾದ ರಣಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 19. 2 ಓವರ್​ಗಳಲ್ಲಿ 108 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಆಡಿದ ಭಾರತ14.1 ಓವರ್​ಗಳಲ್ಲಿ 3 ವಿಕೆಟ್​ಗೆ 109 ರನ್ ಬಾರಿಸಿ ಸುಲಭ ಜಯ ದಾಖಲಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಅತ್ಯುತ್ತಮವಾಗಿ ಬ್ಯಾಟಿಂಗ್ ನಡೆಸಿತು.ಮೊದಲ ವಿಕೆಟ್​ಗೆ ಶೆಫಾಲಿ ವರ್ಮ(40 ರನ್​), ಸ್ಮೃತಿ ಮಂಧಾನಾ (45 ರನ್​) 85 ರನ್ ಬಾರಿಸಿದರು. ಬಳಿಕ ಬಂದ ದಯಾಳನ್​ ಹೇಮಲತಾ 11 ಎಸೆತಕ್ಕೆ 14 ರನ್ ಬಾರಿಸಿ ಔಟಾದರು. ನಂತರ ಶಫಾಲಿ ಔಟಾದರು. ನಾಯಕಿ ಹರ್ಮನ್ ಪ್ರೀತ್ ಕೌರ್​ 5 ರನ್ ಹಾಗೂ ಜೆಮಿಮಾ ರೋಡ್ರಿಗಸ್​ 3 ರನ್ ಬಾರಿಸಿ ಗೆಲವು ತಂದುಕೊಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!