ಲಕ್ನೋದಲ್ಲಿ ಭೀಕರ ಅಪಘಾತ: ಗುಡಿಸಲಿಗೆ ನುಗ್ಗಿದ ಡಂಪರ್, ಒಂದೇ ಕುಟುಂಬದ ನಾಲ್ವರು ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಕ್ರವಾರ ತಡರಾತ್ರಿ ಅಯೋಧ್ಯೆ ಹೆದ್ದಾರಿಯ ಬಿಬಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಡಂಪರ್ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಪರಿಣಾಮ ಗರ್ಭಿಣಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಬಾರಾಬಂಕಿಯ ಜೈತ್‌ಪುರ ನಿವಾಸಿ ಉಮೇಶ್ (35) ಪತ್ನಿ ನೀಲಂ (32), ಪುತ್ರರಾದ ಗೋಲು (4), ಸನ್ನಿ (13) ಮತ್ತು ಮಗಳು ವೈಷ್ಣವಿ ಅವರೊಂದಿಗೆ ಅಯೋಧ್ಯೆ ಹೆದ್ದಾರಿಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು.

ಇಡೀ ಕುಟುಂಬ ಗುಡಿಸಲಿನಲ್ಲಿ ಮಲಗಿದ್ದಾಗ ರಾತ್ರಿ 1 ಗಂಟೆ ಸುಮಾರಿಗೆ ಡಂಪರ್ ಟ್ರಕ್ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದೆ. ಅಪಘಾತದಲ್ಲಿ ಉಮೇಶ್, ನೀಲಂ, ಗೋಲು ಮತ್ತು ಸನ್ನಿ ಸಾವನ್ನಪ್ಪಿದ್ದಾರೆ. ವೈಷ್ಣವಿ ಮಾತ್ರ ಪಾರಾಗಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!