ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ಕನೇ ಆರೋಪಿ ರಾಘವೇಂದ್ರನ ತಾಯಿ ನಿಧನರಾಗಿದ್ದಾರೆ.
ರಾಘವೇಂದ್ರ ಅಲಿಯಾಸ್ ರಘು ತಾಯಿ, ಮಂಜುಳಮ್ಮ (75) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದ ರಾಘವೇಂದ್ರ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ.
ರಾಘವೇಂದ್ರ ಅವರ ತಾಯಿ ಮಾನಸಿಕ ಅಸ್ವಸ್ಥತೆ ಹಾಗೂ ವೃದ್ಧಾಪ್ಯದಿಂದ ಕೋಳಿಬುರುಜನಹಟ್ಟಿ ಸ್ವಗೃಹದಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.