ಸಾನಿಯಾ ಮಿರ್ಜಾ ಜೊತೆ ಮದುವೆ ಗಾಸಿಪ್: ಕ್ರಿಕೆಟಿಗ ಮೊಹಮ್ಮದ್ ಶಮಿ ಕೊಟ್ರು ರಿಯಾಕ್ಷನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಜೀವನದ ಕುರಿತು ಮಾತನಾಡಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಮೂಗುತಿ ಸುಂದರಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಲಿದ್ದಾರೆ ಎನ್ನುವಂತಹ ಗಾಳಿ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಕುರಿತಂತೆ ಮೊದಲ ಬಾರಿಗೆ ಮೊಹಮ್ಮದ್ ಶಮಿ ತುಟಿಬಿಚ್ಚಿದ್ದು, ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ವರ್ಷಾರಂಭದಲ್ಲಿಯೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ತಲಾಕ್ ಮೂಲಕ ಬೇರ್ಪಟ್ಟಿದ್ದರು.ಅತ್ತ ಶಮಿ, ತಮ್ಮ ಪತ್ನಿ ಹಸೀನಾ ಜಹಾನ್ ಅವರಿಂದ ಬೇರ್ಪಟ್ಟಿದ್ದಾರೆ. ಹೀಗಾಗಿ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇಬ್ಬರು ಮದುವೆಯಾಗಲಿದ್ದಾರೆ ಎಂದು ಹಲವು ಟ್ರೋಲ್ ಹಾಗೂ ಮೀಮ್ಸ್‌ ಪೇಜ್‌ಗಳು ಈ ಇಬ್ಬರ ಫೋಟೋ ಸೇರಿಸಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದರು.

ಇದೀಗ ಈ ವಿಚಾರವಾಗಿ ಶಮಿ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಸೋಷಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು. ಕಂಡ ಕಂಡ ಅಸಂಬದ್ಧ ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕೆಲವರು ತಮಾಷೆಗಾಗಿ ಇದನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಯಾಕೆ ಹೀಗೆ? ನಾನು ಫೋನ್ ಓಪನ್ ಮಾಡಿದೆ ಎಂದರೆ ಬರೀ ಇಂತಹದ್ದೇ ಮೀಮ್ಸ್‌ಗಳು ನೋಡಲು ಸಿಗುತ್ತದೆ. ಇದು ತಮಾಷೆಗಾಗಿ ಮಾಡಿದ್ದು ಎನ್ನುವುದು ನನಗೂ ಗೊತ್ತಿದೆ. ಆದರೆ ಇದು ಮತ್ತೊಬ್ಬರ ಖಾಸಗಿ ಬದುಕಿಗೆ ಸಂಬಂಧಿಸಿದ ವಿಚಾರ ಎಂದಾಗ ನೀವು ಸ್ವಲ್ಪ ಯೋಚನೆ ಮಾಡಿ ಇಂತಹವುಗಳ್ನು ಶೇರ್ ಮಾಡಬೇಕಾಗುತ್ತದೆ. ವೇರಿವೈಡ್ ಅಲ್ಲದ ಪೇಜ್‌ಗಳಲ್ಲಿ ಏನು ಬೇಕಿದ್ದರೂ ಪೋಸ್ಟ್ ಆಗುತ್ತದೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸಲು ಹೋಗಲ್ಲ ಎಂದು ಶಮಿ ಹೇಳಿದ್ದಾರೆ.

ಒಂದಂತೂ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಒಂದು ವೇಳೆ ಧೈರ್ಯವಿದ್ದರೇ, ವೆರಿಫೈಡ್‌ ಪೇಜ್‌ಗಳಲ್ಲಿ ಇಂತದ್ದನ್ನು ಶೇರ್‌ ಮಾಡಲಿ, ಆಗ ನಾನು ಖಂಡಿವಾಗಿಯೂ ರಿಪ್ಲೇ ನೀಡುತ್ತೇನೆ. ಯಶಸ್ವಿಯಾಗಲೂ ಪ್ರಯತ್ನಿಸೋಣ, ಕಷ್ಟದಲ್ಲಿರುವವರಿಗೆ ನೆರವಾಗೋಣ. ನೀವು ನಿಮ್ಮನ್ನು ಉನ್ನತೀಕರಿಸಿಕೊಳ್ಳಿ, ಆಗ ನೀವೂ ಒಳ್ಳೆಯವರಾಗುತ್ತೀರ ಎಂದು ಶಮಿ ಖಡಕ್‌ ಉತ್ತರ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಮೊಹಮ್ಮದ್ಸು ಶಮಿ ಮಾತು ಸುಸಂಸ್ಕೃತರಿಗೆ ಚಾಟಿ ಏಟಿನಂತಿದೆ.ಭಂಢರಿಗೆ ಮೂರೂ ಬಿಟ್ಟವರಿಗೆ,ಕಂಡವರ ಮನೆಯ ಬೆಂಕಿಗೆ ಮೈ ಕಾಯಿಸಿಕೊಳ್ಳುವವರಿಗೆ
    ನಿಷ್ಪ್ರಯೋಜಕ !!!

LEAVE A REPLY

Please enter your comment!
Please enter your name here