ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಮಳೆಗೆ ರಸ್ತೆಯೆಲ್ಲಾ ಕೆಂಪು ನೀರು ಹರಿಯುತ್ತದೆ, ಇನ್ನು ತೋಟಗಳೆಲ್ಲ ಮುಳುಗಿ ಹೋಗ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಾವಿಯೊಂದರ ಫೋಟೊ, ವಿಡಿಯೋ ವೈರಲ್ ಆಗಿದೆ.
ಭಾರೀ ಮಳೆಗೆ ನದಿ ಹೊಳೆ ತುಂಬಿ ಹರಿದು ತೋಟ ಮುಳುಗಿದರೂ, ಆ ತೋಟದಲ್ಲಿರುವ ಬಾವಿ ನೀರಿಗೆ ಕೆಸರು ನೀರು ಸೋಕದೆ, ಆ ನೀರು ಸ್ವಚ್ಛಂದವಾಗಿ, ತಿಳಿಯಾಗಿಯೇ ಇತ್ತು. ಈ ಅದ್ಭುತ ದೃಶ್ಯ ನೋಡುಗರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆಳ್ಳಿಪ್ಪಾಡಿ ಎಂಬಲ್ಲಿನ ಕೂಟೇಲು ಬಳಿ ಈ ಅಪರೂಪದ ದೃಶ್ಯ ನೋಡ ಸಿಕ್ಕಿದ್ದು, ಪ್ರಕೃತಿಯ ಅದ್ಭುತವನ್ನು ಮನ್ಮಥ ಶೆಟ್ಟಿ ಎಂಬವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ನಮ್ಮಬಿಲ್ಲವರ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram