May 19, 2026
Tuesday, May 19, 2026
spot_img

SHOCKING | ಥೈಲ್ಯಾಂಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಬೃಹತ್‌ ಕ್ರೇನ್‌, 22 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಲಿಸುತ್ತಿದ್ದ ರೈಲಿನ ಮೇಲೆ ಕ್ರೇನ್ ಬಿದ್ದು ಕನಿಷ್ಠ 22 ಜನ ಮೃತಪಟ್ಟ ಘಟನೆ ಥೈಲ್ಯಾಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ನಡೆದಿದೆ.

ಬ್ಯಾಂಕಾಕ್‌ನಿಂದ ಈಶಾನ್ಯಕ್ಕೆ 230 ಕಿಮೀ (143 ಮೈಲುಗಳು) ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ.

ರೈಲು ಉಬೊನ್ ರಾಟ್ಚತಾನಿ ಪ್ರಾಂತ್ಯಕ್ಕೆ ಹೋಗುತ್ತಿತ್ತು. ಈ ವೇಳೆ ಹೈಸ್ಪೀಡ್ ರೈಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್‌ ಕುಸಿದು ಒಂದು ಬೋಗಿಯ ಮೇಲೆ ಬಿದ್ದಿದೆ.

ಕ್ರೇನ್‌ ಬೋಗಿಯ ಮೇಲೆ ಬಿದ್ದ ಕೂಡಲೇ ರೈಲು ಹಳಿ ತಪ್ಪಿದೆ. ರೈಲಿನಲ್ಲಿ ಸುಮಾರು 195 ಜನ ಪ್ರಯಾಣಿಸುತ್ತಿದ್ದರು. ಅಪಘಾತದ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !