ನಟ ದರ್ಶನ್‌ಗೆ ಜೈಲೂಟವೇ ಗತಿಯಾ ಅಥವಾ ಮನೆಯಿಂದ ಏನಾದ್ರು ಸಿಗತ್ತಾ? ಇಂದು ವಿಚಾರಣೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ನಟ ದರ್ಶನ್‌ ಜೈಲು ಸೇರಿ ತಿಂಗಳುಗಳೇ ಕಳೆದಿದೆ. ತಿಂಗಳಿನಿಂದ ಜೈಲಿನಲ್ಲಿರೋ ದರ್ಶನ್‌ಗೆ ಊಟ ಸೇರದೆ, ನಿದ್ದೆಯೂ ಇಲ್ಲದೆ ಸೆರೆಮನೆ ಅಕ್ಷರಶಃ ಸೆರೆಮನೆವಾಸವೇ ಆಗಿದೆ.

ಮನೆ ಊಟ, ಪುಸ್ತಕ, ಹಾಸಿಗೆಗಾಗಿ ಮನವಿ ಮಾಡಿ ದರ್ಶನ್​ ಸಲ್ಲಿಸಿದ್ದ ರಿಟ್​ ಅರ್ಜಿ ವಿಚಾರಣೆ ಕಳೆದ ಶನಿವಾರ ನಡೆದಿತ್ತು. ಅಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಹೈಕೋರ್ಟ್​ ನಿರ್ದೇಶನದಂತೆ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ನಟ ದರ್ಶನ್​ ಪರ ವಕೀಲರು ಅರ್ಜಿ ಸಲ್ಲಿಸಿದ್ದು. ಇದೀಗ ಇವತ್ತು ದರ್ಶನ್ ಸಲ್ಲಿಕೆ ಮಾಡಿದ್ದ ಮನೆಯೂಟದ ರಿಟ್‌ ಅರ್ಜಿ ವಿಚಾರಣೆಗೆ ಬರಲಿದೆ. ಪರಪ್ಪನ ಅಗ್ರಹಾರದಲ್ಲಿರೋ ದಾಸನಿಗೆ ಮನೆಯೂಟ ಸಿಗುತ್ತಾ? ಇಲ್ವಾ ಎಂಬ ಪ್ರಶ್ನೆ ಮೂಡಿದೆ.

ಇನ್ನೂ ಮನೆಯೂಟಕ್ಕಾಗಿ ಹೈಕೋರ್ಟ್‌ಗೆ ಏಕಾಏಕಿ ಅರ್ಜಿ ಸಲ್ಲಿಸಿ ದರ್ಶನ್‌ ಪೇಚಿಗೆ ಸಿಲುಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ 2021ರ ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಸರ್ವೀಸ್ ಮ್ಯಾನ್ಯುಲ್ ಇದರ ಪ್ರಕಾರ ಮನೆ ಊಟ ಪಡೆಯಲು ಅವಕಾಶ ಇದೆ. ಆದ್ರೆ, ಇದರ ಪ್ರಕಾರ ಮನೆ ಊಟ ಪಡೆಯಲು ಬಯಸುವ ಜೈಲು ಬಂಧಿ ಮೊದಲು ಕಾರಾಗೃಹಗಳ ಐಜಿಗೆ ಮನವಿ ಮಾಡಬೇಕು. ಅಥವಾ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಬೇಕು. ಇಲ್ಲಿ ಅವಕಾಶ ಸಿಗದೇ ಇದ್ದಾಗ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ, ದರ್ಶನ್ ಪರ ವಕೀಲರು ಏಕಾಏಕಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 2 ವಾರ ವಿಚಾರಣೆಯಲ್ಲಿದ್ದ ಅರ್ಜಿ ಮ್ಯಾಜಿಸ್ಟ್ರೇಟ್ ಕೋರ್ಟ್ ವರ್ಗಾವಣೆಯಾಗಿದೆ. ಹೀಗೆ ತಪ್ಪು ಕಾನೂನು ಕ್ರಮ ದರ್ಶನ್ ಮನೆಯೂಟಕ್ಕೆ ಕಂಟಕವಾಯ್ತಾ?ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಇಂದಿನ ವಿಚಾರಣೆ ಬಗ್ಗೆ ದರ್ಶನ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!