ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಹಳ ಸದ್ದು ಮಾಡುತ್ತಿದೆ. ಹಲವರು AI ತಂತ್ರಜ್ಞಾನದ ಸಹಾಯದಿಂದ ರಾಜಕೀಯ ನಾಯಕರು, ಕ್ರಿಕೆಟಿಗರು, ಸಿನಿಮಾ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳ ಫೋಟೋಗಳನ್ನು ಭಿನ್ನ ವಿಭಿನ್ನವಾಗಿ ರಚಿಸಿ, ಅಥವಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ.
ಅದೇ ರೀತಿ ಇದೀಗ ಎಲೋನ್ ಮಸ್ಕ್ ಕೂಡಾ ವಿಶ್ವ ನಾಯಕರುಗಳು ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬುದನ್ನು ತೋರಿಸುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
AI ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೋ ಬೈಡನ್ ಸೇರಿದಂತೆ ವಿಶ್ವ ನಾಯಕರು ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ್ದಾರೆ.
ಎಲೋನ್ ಮಸ್ಕ್) ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಫ್ಯೂಚರಿಸ್ಟಿಕ್ ಉಡುಗೆಯಲ್ಲಿ ಕಮಲಾ ಹ್ಯಾರಿಸ್, ಬರಕ್ ಒಬಾಮಾ, ಪೋಪ್ ಪ್ರಾನ್ಸಿಸ್, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್, ಪ್ರಧಾನಿ ನರೇಂದ್ರ ಮೋದಿ, ಎಲಾನ್ ಮಸ್ಕ್, ಬಿಲ್ ಗೇಟ್ಸ್ ಸೇರಿದಂತೆ ಹಲವು ವಿಶ್ವ ನಾಯಕರು ರ್ಯಾಂಪ್ ಮೇಲೆ ಸ್ಟೈಲ್ ಆಗಿ ಹೆಜ್ಜೆ ಹಾಕಿದ್ದಾರೆ.
ವೈರಲ್ ವಿಡಿಯೋದಲ್ಲಿ ಮೊದಲಿಗೆ ಪೋಪ್ ಪ್ರಾನ್ಸಿಸ್ ಅವರು ಬಿಳಿ ಬಣ್ಣದ ಪಫರ್ ಜಾಕೆಟ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಫ್ ಶೋಲ್ಡರ್ ಲೂಯಿ ವಿಟನ್ ಉಡುಪು ಧರಿಸಿ ಮಿಂಚಿದರು. ಇನ್ನೂ ಪ್ರಧಾನಿ ಮೋದಿ ಹಣೆಗೆ ಕುಂಕುಮ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಸ್ಟೈಲಿಶ್ ಬಟ್ಟೆಯನ್ನು ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ದೃಶ್ಯವಿದೆ .
ಈ ವಿಡಿಯೋ 59.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಅನೇಕರು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.