ಹೊಸದಿಗಂತ ವರದಿ, ಹೊಸದಿಲ್ಲಿ:
ಈ ಬಾರಿ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ರೈಲು ಯೋಜನೆಗಳಿಗಾಗಿ 7,500 ಕೋಟಿ ರೂಗಳನ್ನು ಮೀಸಲಿಟ್ಟಿದ್ದು, ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಕೇವಲ 835 ಕೋಟಿ ರೂ ನೀಡಿತ್ತು. ಹೊಸ ಯೋಜನೆಗಳನ್ನು ಹೊರತುಪಡಿಸಿ, ಬಾಕಿ ಇರುವ ಯೋಜನೆಗಳಿಗಾಗಿ ನಮ್ಮ ಸರ್ಕಾರ 7,500 ಕೋಟಿ ಮೀಸಲಿರಿಸಿದೆ ಎಂದು ಹೇಳಿದರು.
ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿರುವ ಕಳೆದ 6 ಬಜೆಟ್‌ಗಳಿಗೆ ಹೋಲಿಕೆ ಮಾಡಿದರೆ ಈ ಬಜೆಟ್ ಅವರ ಅನುಭವ ಪ್ರಧಾನಿ ಮಂತ್ರಿಗಳ ದೂರಾದೃಷ್ಟಿ ಚಿಂತನೆ ಮತ್ತು ರಾಷ್ಟ್ರಕ್ಕೆ ಅವರು ಕೊಡುತ್ತಿರುವ ಕೊಡುಗೆಯನ್ನು ಪ್ರಶಂಸೆ ಮಾಡಬೇಕಿದೆ.
ರೈಲ್ವೆ ಇಲಾಖೆಗೆ 2013-14ರಲ್ಲಿ ಮನಮೋಹನ್ ಸಿಂಗ್ ಅವರ ಕೊನೆಯ ಬಜೆಟ್‌ನಲ್ಲಿ ರೈಲ್ವೆಗೆ 28,174 ಕೋಟಿ ರೂ ಈ ಬಾರಿಯ 2024-25ರಲ್ಲಿ 2,65,200 ಕೋಟಿ ರೂ ಹಣವನ್ನು ಮೀಸಲಿಡಲಾಗಿದೆ. ಮತ್ತು ಹೊಸ ಯೋಜನೆಗಳಿಗೆ ಕಳೆದ ಬಾರಿ 34 ಸಾವಿರ ಕೋಟಿ ರೂ ಇಡಲಾಗಿದ್ದು ಈ ಬಾರಿ 34,600 ಕೋಟಿಯನ್ನು ನೀಡಲಾಗಿದೆ ಎಂದರು.
ಕಳೆದ ಸರ್ಕಾರದಲ್ಲಿ 50 ವರ್ಷದಲ್ಲಿ ರೈಲ್ವೆ ಡಬ್ಲಿಂಗ್ ಲೇನ್‌ಗೆ 8.5 ರಿಂದ 9 ಸಾವಿರ ಕಿ.ಮೀ ಡಬ್ಲಿಂಗ್ ಆಗಿದ್ದು ಈ ಬಾರಿ 10 ಸಾವಿರ ಕಿ.ಮೀ ಆಗಿರುವುದರಿಂದ ಬಾಕಿಯಿರುವ ಮುಂದಿನ ಒಂದು ವರ್ಷದಲ್ಲಿ ಈ ಡಬ್ಲಿಂಗ್ ಲೇನ್ ಪೂರೈಸುವ ದೃಷ್ಟಿಯಿಂದ 29,300 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.
ಲೆವೆಲ್ ಕ್ರಾಸಿಂಗ್ ಅಭಿವೃದ್ಧಿಗಾಗಿ 9, 270 ಕೋಟಿ ರೂ ಮೀಸಲು ಆರ್‌ಓಬಿ ಆರ್ ಯುಬಿ ನ ಲೆವೆಲ್ ಕ್ರಾಸಿಂಗ್‌ಗೆ ಅನಾಹುತ ತಡೆಯುವ ದೃಷ್ಟಿಯಿಂದ ಕಳೆದ ವರ್ಷ 6,300 ಕೋಟಿ ರೂ. ಹಣ ಇಟ್ಟಿದ್ದು, ಈ ಬಾರಿ 9,270 ಕೋಟಿ ರೂ ಹಣವನ್ನು ಮೀಸಲಿಡಲಾಗಿದೆ. ಅಲ್ಲದೇ, ಪ್ರೈವಾಕ್, ಎಫ್‌ಓಬಿ, ಫ್ಲಾಟ್ ಫಾರ್ಮ್ ಗಳನ್ನು ನಿರ್ಮಾಣ ಮಾಡುವ ಸಲುವಾಗಿ ಕಸ್ಟಮರ್ಸ್ ಎಮಿನಿಟಿಸ್‌ನ್ನು ಮೊದಲ ಬಾರಿಗೆ 15 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.