ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಎಂಕೆ ಸಂಸದ ದಯಾನಿಧಿ ಮಾರನ್ ಮಹಿಳೆಯರ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಉತ್ತರ ಭಾರತದ ಮಹಿಳೆಯರನ್ನು- ತಮಿಳುನಾಡಿನ ಮಹಿಳೆಯರನ್ನು ಹೋಲಿಸುವ ಹೇಳಿಕೆಯೊಂದಿಗೆ ಭಾರಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ.
ಚೆನ್ನೈ ಸೆಂಟ್ರಲ್‌ನಿಂದ ನಾಲ್ಕು ಬಾರಿ ಸಂಸದರಾಗಿರುವ ಮಾರನ್, ತಮಿಳುನಾಡಿನಲ್ಲಿ ಮಹಿಳೆಯರಿಗೆ ಅಧ್ಯಯನ ಮಾಡಲು ಹೇಳಿದರೆ, ಉತ್ತರ ಭಾರತದಲ್ಲಿ ಮಹಿಳೆಯರಿಗೆ ಅಡುಗೆಮನೆಯಲ್ಲಿ ಕೆಲಸ ಮಾಡಲು ಮತ್ತು ಮಕ್ಕಳನ್ನು ಹೆರಲು ಕೇಳಲಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಹುಡುಗಿಯರು ಲ್ಯಾಪ್‌ಟಾಪ್ ಜೊತೆ ಕೆಲಸ ಮಾಡುತ್ತಾ ಆತ್ಮವಿಶ್ವಾಸ ಮತ್ತು ಹೆಮ್ಮೆ ಪಡುವಂತೆ ಇರಬೇಕು. ನೀವು ಸಂದರ್ಶನಕ್ಕೆ ಹೋಗುವುದಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯುವುದಾಗಲಿ, ತಮಿಳುನಾಡಿನಲ್ಲಿ ನಾವು ಹುಡುಗಿಯರಿಗೆ ಓದಿಕೊಳ್ಳಲು, ಅಧ್ಯಯನ ಮಾಡಲು ಹೇಳುತ್ತೇವೆ. ಆದರೆ, ಉತ್ತರ ಭಾರತದಲ್ಲಿ ಹುಡುಗಿಯರನ್ನು ಕೆಲಸಕ್ಕೆ ಹೋಗಲು ಬಿಡುವುದಿಲ್ಲ. ಮನೆಯಲ್ಲಿ ಇರಬೇಕು, ಅಡುಗೆಮನೆಯಲ್ಲಿ ಇರಬೇಕು, ಮಗುವನ್ನು ಹೆರಬೇಕು. ಅದೇ ಅಲ್ಲಿನ ಮಹಿಳೆಯರಿಗೆ ಇರುವ ಕೆಲಸ ಎಂದಿದ್ದಾರೆ. ಈ ಹೇಳಿಕೆ ಸಾಕಷ್ಟು ಮಂದಿಗೆ ಇಷ್ಟವಾಗಿಲ್ಲ.


