ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಂತ ವೇಗದ ರೈಲು ಎಂದು ಕರೆಯಲ್ಪಡುವ ವಂದೇ ಭಾರತ್ ರೈಲು ಪ್ರಸ್ತುತ ದೇಶದ ಹಲವು ಭಾಗಗಳಲ್ಲಿ ಓಡುತ್ತಿದೆ. ವೇಗವನ್ನು ಹೆಚ್ಚಿಸಲು ಈ ರೈಲುಗಳು ಕಡಿಮೆ ನಿಲ್ದಾಣಗಳನ್ನು ಹೊಂದಿದ್ದವು.
ಆದರೆ, ಪ್ರಯಾಣಿಕರ ಅನುಕೂಲವನ್ನು ಪರಿಗಣಿಸಿ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲುಗಳನ್ನು ನಿಲುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
ಇದೀಗ ಕೊಂಕಣ ರೈಲ್ವೇ ನಿಗಮದ ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿದ್ದು, ಮಂಗಳೂರು ಸೆಂಟ್ರಲ್ ಸ್ಟೇಷನ್ ನಿಂದ ಮಡಂಗಾವ್ ವರೆಗೆ ವಾರದಲ್ಲಿ ಆರು ದಿನ ಸಂಚರಿಸುವ ವಂದೇ ಭಾರತ್ ರೈಲನ್ನು ಉಡುಪಿ ಮತ್ತು ಕಾರವಾರ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚಿಸಿದ್ದಾರೆ.
Nimage tumbha tumbha dhanyavadagalu
Please I request stop the train kumta station, so many peoples use this train