ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೋಡಲು ಕುಟುಂಬಸ್ಥರು, ಆಪ್ತರು, ನಟರು ಜೈಲಿಗೆ ಭೇಟಿ ನೀಡಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ದರ್ಶನ್ ತಮ್ಮ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.
ನನ್ನನ್ನು ನೋಡಲು ಯಾರೂ ಜೈಲಿಗೆ ಬರಬೇಡಿ. ಕುಟುಂಬವನ್ನು ಹೊರತುಪಡಿಸಿ ಯಾರೂ ಬರಬಾರದು. ನನ್ನನ್ನು ಜೈಲಿನಲ್ಲಿ ನೋಡಿದರೆ ನಿಮಗೂ ಬೇಜಾರಾಗುತ್ತೆ. ಜೈಲಿನಲ್ಲಿರುವ ನನಗೂ ನೋಡಲು ನೋವುಂಟುಮಾಡುತ್ತದೆ. ಇನ್ನು ಮುಂದೆ ಸಂಬಂಧಿಕರ ಭೇಟಿಗೆ ಮಾತ್ರ ಅವಕಾಶ ನೀಡಬೇಕು. ಅಭಿಮಾನಿಗಳು ಶಾಂತವಾಗಿರುವಂತೆ ನಟ ದರ್ಶನ್ ಮನವಿ ಮಾಡಿದ್ದಾರೆ.