ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ವ್ಯಾಪ್ತಿಯಲ್ಲಿರುವ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ಕಾಫಿ ಬಾರ್ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೋಟೆಲ್, ಬಾರ್ & ರೆಸ್ಟೋರೆಂಟ್ಗಳಲ್ಲಿ ಧೂಮಪಾನ ವಲಯ ಮಾಡದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಹೋಟೆಲ್, ಪಬ್, ಬಾರ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.
ಬಿಬಿಎಂಪಿ ಹೊಸ ನಿಯಮ ಏನು?
- 30 ಕೊಠಡಿಗಳಿಗಿಂತ ಮೇಲ್ಪಟ್ಟ ಹೋಟೆಲ್ , ಬಾರ್ & ರೆಸ್ಟೋರೆಂಟ್, ಪಬ್ ಇದ್ರೆ 30 ಕುರ್ಚಿ ಇರುವ ಧೂಮಪಾನ ಪ್ರದೇಶ ನಿಗದಿ ಮಾಡಬೇಕು.
- ಧೂಮಪಾನ ವಲಯ ನಿರ್ಮಾಣ ಮಾಡಿ ಪೋಟೋ ಸಮೇತ ಸ್ಮೋಕಿಂಗ್ ಝೂನ್ಗೆ ಪರವಾನಗಿಗೆ ಅರ್ಜಿ ಹಾಕಬೇಕು.
- ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಯಮಾನುಸಾರ ಸ್ಮೋಕಿಂಗ್ ಝೂನ್ ಇದೆಯೇ ಅಂತ ರಿಪೋರ್ಟ್ ಕೊಟ್ಟರೆ, ಆಮೇಲೆ ಎನ್ಒಸಿ ವಿತರಣೆಗೆ ಸೂಚನೆ ನೀಡಲಾಗುತ್ತದೆ.
- ಸ್ಮೋಕಿಂಗ್ ಏರಿಯಾ ಕೊಠಡಿಗೆ ಎಂಟ್ರಿ ಆದಾಗ ಸ್ವಯಂಚಾಲಿತವಾಗಿ ಬಾಗಿಲು ಬಂದ್ ಆಗುವ ರೀತಿಯಲ್ಲಿ ಇರಬೇಕು.
- ಸ್ಮೋಕಿಂಗ್ ಏರಿಯಾ ಅಂತ ನಾಮಫಲಕ ದೊಡ್ಡದಾಗಿ ಇರಬೇಕು. 60-30ರ ನಿಯಮದಲ್ಲಿ ಅಕ್ಷರಗಳು ಇರಬೇಕು.
- ಸ್ಮೋಕಿಂಗ್ ಝೂನ್ಗಳಲ್ಲಿ ಏರ್ ಫ್ಲೋ ಸಿಸ್ಟಂ ಇರಬೇಕು. ಪಕ್ಕದ ಮನೆ ಅಥವಾ ಪಕ್ಕದ ಕಟ್ಟಡಗಳಿಗೆ ಹೊಗೆ ಹೋಗುವಂತೆ ಇರಬಾರದು.
- ಸ್ಮೋಕಿಂಗ್ ಝೂನ್ ನಿಯಮ ಉಲ್ಲಂಘನೆಯಾದ್ರೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.