ವಯನಾಡಿನಲ್ಲಿ ಭೂಕುಸಿತ: ಕೇರಳ ಸಿಎಂ ರಿಲೀಫ್‌ ಫಂಡ್‌ಗೆ 5 ಕೋಟಿ ನೀಡಿದ ಗೌತಮ್‌ ಅದಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತದಲ್ಲಿ ಇಲ್ಲಿಯವರೆಗೂ 205 ಮಂದಿ ಸಾವು ಕಂಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ .

ಇದರ ನಡುವೆ ಪರಿಹಾರ ನಿಧಿಗೆ ಹಣಕಾಸಿನ ನೆರವೂ ಬೀಳುತ್ತಿದೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಬುಧವಾರ ಕೇರಳ ಮುಖ್ಯಮಂತ್ರಿಗೆ 5 ಕೋಟಿ ರೂ. ಸಂಕಷ್ಟ ಪರಿಹಾರ ನಿಧಿಯನ್ನು ನೀಡಿದ್ದಾರೆ.

ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಮಂಗಳವಾರ ಸಂಭವಿಸಿದ ಈ ದುರಂತದಲ್ಲಿ ಹಲವಾರು ಜನರು ಈಗಲೂ ನಾಪತ್ತೆಯಾಗಿದ್ದಾರೆ ಮತ್ತು 400 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಸಂತಾಪ ವ್ಯಕ್ತಪಡಿಸಿದ ಗೌತಮ್‌ ಅದಾನಿ, “ವಯನಾಡಿನಲ್ಲಿ ಸಂಭವಿಸಿದ ದುರಂತದ ಪ್ರಾಣಹಾನಿಯಿಂದ ತೀವ್ರ ದುಃಖಿತವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನೋವಿನಲ್ಲಿ ನಾನೂ ಭಾಗಿಯಾಗಿರುವೆ. ಈ ಕಷ್ಟದ ಸಮಯದಲ್ಲಿ ಅದಾನಿ ಸಮೂಹವು ಕೇರಳದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ನಾವು ನಮ್ಮ ಬೆಂಬಲವನ್ನು ನೀಡುತ್ತೇವೆ. ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ನೀಡಲಿದ್ದೇವೆ’ ಎಂದು ತಿಳಿಸಿದ್ದಾರೆ.

ಸೇನೆ, ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಒಳಗೊಂಡಿರುವ ರಕ್ಷಣಾ ತಂಡಗಳು ಬದುಕುಳಿದವರನ್ನು ಹುಡುಕಲು ಮತ್ತು ಮೃತದೇಹಗಳನ್ನು ಹುಡುಕಲು ದಣಿವರಿಯಿಲ್ಲದೆ ಶ್ರಮಿಸುತ್ತಿವೆ. ಬುಧವಾರದ ಹೊತ್ತಿಗೆ, ಸೇನೆಯು ಸುಮಾರು 1,000 ಜನರನ್ನು ರಕ್ಷಿಸಿದೆ, ಆದರೆ ವಾಯುಪಡೆಯು ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಸಹಾಯ ಮಾಡಲು ವೈಮಾನಿಕ ವಿಚಕ್ಷಣೆಯನ್ನೂ ನಡೆಸಿದೆ.

https://x.com/gautam_adani/status/1818601125547065776?ref_src=twsrc%5Etfw%7Ctwcamp%5Etweetembed%7Ctwterm%5E1818601125547065776%7Ctwgr%5E0ff91b7b26deba141fd10d61fa35470b3bcdcd9a%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fgautam_adani%2Fstatus%2F1818601125547065776%3Fref_src%3Dtwsrc5Etfw

ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಚೂರಲ್ಮಲಾದಲ್ಲಿ ಸೇನೆಯು ಬೈಲಿ ಸೇತುವೆಯನ್ನು ನಿರ್ಮಿಸಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿದೆ. ಈ ನಡುವೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರವು ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಖಚಿತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!