ಆಗಸ್ಟ್ 11 ರಿಂದ ದೇಶಾದ್ಯಂತ ಬಿಜೆಪಿ ‘ಹರ್ ಘರ್ ತಿರಂಗಾ’ ಅಭಿಯಾನ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಜನತಾ ಪಕ್ಷ ಆಗಸ್ಟ್ 11 ರಿಂದ ರಾಷ್ಟ್ರದಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ಕೇಂದ್ರದ ಆಡಳಿತ ಪಕ್ಷವು ಆಗಸ್ಟ್ 11 ರಿಂದ ಆಗಸ್ಟ್ 14 ರವರೆಗೆ ತಿರಂಗಾ ಯಾತ್ರೆಯನ್ನು ನಡೆಸಲಿದೆ.

ಈ ಅವಧಿಯಲ್ಲಿ ಪ್ರತಿ ಮನೆ, ಅಂಗಡಿ, ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಸ್ವಚ್ಛತಾ ಅಭಿಯಾನವೂ ನಡೆಯಲಿದೆ.

‘ಹರ್ ಘರ್ ತಿರಂಗಾ’ ಅಭಿಯಾನದ ಭಾಗವಾಗಿ ಆಗಸ್ಟ್ 15 ರೊಳಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಾಗರಿಕರಿಗೆ ಮನವಿ ಮಾಡಿದರು.

78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಜೆಪಿ ಆಗಸ್ಟ್ 11ರಿಂದ ಆಗಸ್ಟ್ 15ರವರೆಗೆ ‘ಹರ್ ಘರ್ ತಿರಂಗ’ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪ್ರಮುಖ ಕಾರ್ಯಕ್ರಮಗಳು: ತಿರಂಗಾ ಯಾತ್ರೆ, ಆಗಸ್ಟ್ 11 ರಿಂದ ಆಗಸ್ಟ್ 14 ರವರೆಗೆ ರಾಷ್ಟ್ರವ್ಯಾಪಿ ಮೆರವಣಿಗೆ ನಡೆಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!