ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ಮಳೆಯಿಂದಾಗಿ ತತ್ತರಿಸಿದ್ದು, ವಿಮಾನ ಸಂಚಾರ ಸ್ಥಗಿತವಾಗಿದೆ. ರಸ್ತೆಯಲ್ಲಿ ನೀರು ನಿಂತಿದ್ದು, ಜನ ಓಡಾಟಕ್ಕೆ ಕಷ್ಟಪಡುವಂತಾಗಿದೆ.
ಒಟ್ಟಾರೆ 10 ವಿಮಾನಗಳು ರಾಷ್ಟ್ರ ರಾಜಧಾನಿಯಿಂದ ಬೇರೆಡೆಗೆ ಮುಖಮಾಡಿ ಹಾರಿವೆ, ಕೆಲವು ವಿಮಾನಗಳ ಹಾರಾಟ ಸ್ಥಗಿತವಾಗಿದೆ, ಇನ್ನು ಶಾಲಾ ಕಾಲೇಜುಗಳಿಗೆ ಬೀಗ ಬಿದ್ದಿದ್ದು, ಹೊರಗೆಲ್ಲಾ ನೀರು ನಿಂತಿದೆ.
ಧಾರಾಕಾರ ಮಳೆಯ ಪರಿಣಾಮವಾಗಿ ದೆಹಲಿಗೆ ಹೊರಡಬೇಕಿದ್ದ 8 ವಿಮಾನಗಳು ಜೈಪುರದತ್ತ ಹಾಗೂ ಎರಡು ವಿಮಾನಗಳು ಲಖನೌನತ್ತ ಮಾರ್ಗ ಬದಲಿಸಿದೆ. ಒಂದೇ ಒಂದು ಗಂಟೆಯಲ್ಲಿ ಸುಮಾರು 100 ಮಿಲಿ ಮೀಟರ್ನಷ್ಟು ಮಳೆ ಬಿದ್ದಿದ್ದು, ದೆಹಲಿ ಹೆಚ್ಚು ಕಡಿಮೆ ನದಿಯಂತಾಗಿ ಹೋಗಿದೆ.
ರಣಭೀಕರ ಮಳೆಗೆ ರಣಚಂಡಿಯಂತೆ ಉಗ್ರವಾಗಿ ಯಮುನೆ ಹರಿಯುತ್ತಿದ್ದಾಳೆ. ಮುಂದಿನ 24 ಗಂಟೆಗಳ ಕಾಲ ಈ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಆಗಸ್ಟ್ 5ರವರೆಗೆ ದೆಹಲಿಯಲ್ಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಮಳೆ ಮುಂದವರಿಯಲಿದೆ ಎಂದು ಹೇಳಲಾಗಿದೆ. ಇನ್ನು ಗುರುವಾರದವರೆಗೂ ಶಾಲಾ ಕಾಲೇಜುಗಳಿಗೆ ಘೋಷಿಸಲಾಗಿದ್ದ ರಜೆಯನ್ನು ವಿಸ್ತರಿಸಲಾಗಿದೆ.