ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ಜನರೇಷನ್ನಲ್ಲಿ ಜೀವ ಹೋಗುವಂಥ ಥ್ರಿಲ್ಲಿಂಗ್ ತಾಣಗಳಲ್ಲಿ ಫೋಟೊ, ವಿಡಿಯೋ ತೆಗೆದು ಜನರಿಂದ ಶಭಾಷ್ ಎನಿಸಿಕೊಳ್ಳುವ ಹುಚ್ಚಾಟ ಹೆಚ್ಚಾಗಿದೆ.
ಸ್ವಲ್ಪ ಯಾಮಾರಿದ್ರೂ ಜೀವ ಹೋಗತ್ತೆ ಅಂತ ಗೊತ್ತಿದ್ರೂ ಜೀವ ಉಳಿದರೆ ವಿಡಿಯೋಗೆ ಎಷ್ಟು ಲೈಕ್ಸ್ ಬರಬಹುದು ಎನ್ನುವ ಚಿಂತೆ ಇವರದ್ದು. ಇದೇ ರೀತಿ ಇಲ್ಲೊಬ್ಬ ಯುವಕ 102 ಅಂತಸ್ತಿನ ಕಟ್ಟಡದ ತುದಿಗೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಈ ದೃಶ್ಯ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
@livejn ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 4 ದಿನಗಳಲ್ಲಿ 49.6 ಮಿಲಿಯನ್ ಅಂದರೆ 4ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 3,235,052 ನೆಟ್ಟಿಗರು ವಿಡಿಯೋಗೆ ಲೈಕ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋ ಅಮೆರಿಕದ ನ್ಯೂಯಾರ್ಕ್ ನಗರದ್ದು ಎಂದು ವರದಿಯಾಗಿದೆ.
View this post on Instagram