ಕ್ಯಾಬಿನೆಟ್‌ನಲ್ಲಿ ರಾಜ್ಯಪಾಲರ ವಿರುದ್ದ ನಿರ್ಣಯ: ವಿಪಕ್ಷ ನಾಯಕ ಅಶೋಕ್‌ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯರನ್ನು ರಕ್ಷಣೆ ಮಾಡಲು ಕ್ಯಾಬಿನೆಟ್‌ನಲ್ಲಿ ರಾಜ್ಯಪಾಲರ ವಿರುದ್ದ ನಿರ್ಣಯ ಅಂಗೀಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕ್ಯಾಬಿನೆಟ್ ಮಂತ್ರಿಗಳು ಸಿದ್ದರಾಮಯ್ಯ ರಕ್ಷಣೆ ನಿಂತಿದ್ದಾರೆ‌. ದೂರು ಕೊಟ್ಟಾಗ ಅದಕ್ಕೆ ವಿವರಣೆ ಕೇಳುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಹೀಗೆ ಕೇಳಬೇಕು ಅಂದರೆ ಆಗುತ್ತಾ? ರಾಜ್ಯಪಾಲರು ನೋಟಿಸ್‌ ಕೊಡುವಾಗ ಕಾನೂನು ನೋಡಿ ಕೊಟ್ಟಿರುತ್ತಾರೆ. ಅದನ್ನ ‌ಪ್ರಶ್ನೆ ಮಾಡಿದ್ರೆ ಕಾನೂನುಗಿಂತ ನೀವು ದೊಡ್ಡವರಾ? ಕ್ಯಾಬಿನೆಟ್ ಕರೆದು ರಾಜ್ಯಪಾಲರ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಅಂತ ಕಿಡಿಕಾರಿದರು.

ಸಂವಿಧಾನದ ಪ್ರಕಾರ ರಾಜ್ಯಕ್ಕೆ ಸುಪ್ರೀಂ ರಾಜ್ಯಪಾಲರು. ಅವರಿಗೆ ಕಾನೂನು ಹೇಳಿಕೊಡಲು ಹೋಗ್ತೀರಾ? ಇದರಿಂದ ನೀವು ತಪ್ಪು ಮಾಡಿದ್ದೀರಾ ಅಂತ ಅಗುತ್ತದೆ. ಏನು ತಪ್ಪು ಮಾಡಿಲ್ಲ ಅಂದರೆ ಯಾಕೆ ಅಧಿವೇಶನದಲ್ಲಿ ಚರ್ಚೆ ಮಾಡಲಿಲ್ಲ. ಸಿಎಂ ಅವರು ದಾಖಲೆ ಸಮೇತ ಅಲ್ಲೇ ಎಲ್ಲವನ್ನು ಹೇಳಬಹುದಿತ್ತು. ಆದರೆ ಸಿದ್ದರಾಮಯ್ಯ ಅಂದು ಹೇಡಿ ತರಹ ಓಡಿ ಹೋಗಿದ್ದಾರೆ. ಇವರು ತಪ್ಪು ಮಾಡಿಲ್ಲ ಅಂದರೆ ಸರ್ಕಾರ ಅಸ್ಥಿರ ಆಗುತ್ತೆ ಅಂತ ಯಾಕೆ ಭಯ ಬೀಳ್ತಾರೆ ಅಂತ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ಮೇಲು ದೂರು ದಾಖಲಾಗಿತ್ತು. ಅಂದು ಅವರು ಹೋರಾಟ ಮಾಡಿದ್ದರು. ಯಡಿಯೂರಪ್ಪ ವಿರುದ್ದ ಅಂದು ಅನುಮತಿ ಕೊಟ್ಟಿದ್ದು ಯಾರು? ಅವತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು. ಅವತ್ತು ರಾಜ್ಯಪಾಲರು ಯಾರು? ನಾವು ಅವತ್ತು ಕ್ಯಾಬಿನೆಟ್‌ನಲ್ಲಿ ಹೀಗೆ ಏನಾದ್ರು ನಿರ್ಣಯ ಮಾಡಿದ್ದೀವಾ? ಇಷ್ಟೆಲ್ಲ ಇವರು ಮಾಡುತ್ತಿರುವುದು ನೋಡಿದರೆ ಇವರು ತಪ್ಪು ಮಾಡಿರುವುದು ನಿಜ ಅಂತ ಅನ್ನಿಸುತ್ತಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!