Paris Olympics | ಬ್ಯಾಡ್ಮಿಂಟನ್ ಕ್ವಾರ್ಟರ್​ ಫೈನಲ್​ ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್​ ಒಲಿಂಪಿಕ್ಸ್​ ಪುರುಷರ ಡಬಲ್ಸ್​ ಬ್ಯಾಡ್ಮಿಂಟನ್​ ವಿಭಾಗದಲ್ಲಿ ಭಾರತದ ತಾರಾ ಬ್ಯಾಡ್ಮಿಂಟನ್​ ಜೋಡಿ ಸಾತ್ವಿಕ್​-ಚಿರಾಗ್​ ಶೆಟ್ಟಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್‌ ಅಭಿಯಾನ ಕೊನೆಗೊಳಿಸಿದ್ದಾರೆ.

ಗುರುವಾರ ನಡೆದ ಅತ್ಯಂತ ಜಿದ್ದಾಜಿದ್ದಿನ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸಾತ್ವಿಕ್​-ಚಿರಾಗ್ ಜೋಡಿ ಮಲೇಷ್ಯಾದ ಆರನ್ ಚಿಯಾ-ವೂಯಿ ಯಿಕ್ ಸೊಹ್ ಜೋಡಿ ವಿರುದ್ಧ 13-21 21-14, 21-16 ಗೇಮ್‌ಗಳ ಅಂತರದಿಂದ ಸೋತು ನಿರಾಸೆ ಎದುರಿಸಿದರು.

ಮೊದಲ ಗೇಮ್​ನಲ್ಲಿ ಒಂದು ಹಂತದ ವರೆಗೂ ಭಾರತೀಯ ಜೋಡಿಗೆ ಮಲೇಷ್ಯಾದ ಜೋಡಿ ತೀವ್ರ ಪೈಪೋಟಿ ನೀದರೂ ಕೂಡ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. 13-21 ಗೇಮ್​ಗಳ ಅಂತರದಿಂದ ಸೋಲು ಕಂಡರು. 2ನೇ ಗಮ್​ನಲ್ಲಿ ತಿರುಗಿ ಬಿದ್ದ ​ಚಿಯಾ-ವೂಯಿ ಬಲಿಷ್ಠ ಹೊಡೆತಗಳ ಮೂಲಕ ಈ ಗೇಮ್​ ಅನ್ನು 21-14 ಅಂತರದಿಂದ ಗೆದ್ದು ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಭಾರತೀಯ ಜೋಡಿಗೆ ಗೆಲ್ಲುವ ಅವಕಾಶವಿದ್ದರೂ ಕೂಡ ಹಲವು ತಪ್ಪುಗಳನ್ನು ಮಾಡಿದ ಅಂತಿಮವಾಗಿ ಕಾರಣ ಸೋಲಿಗೆ ತುತ್ತಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!