ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಇಂದು ಭಾರೀ ಮಳೆ ಸುರಿಯುತ್ತಿರುವುದರಿಂದ ಬಿಯಾಸ್ ನದಿಯು ಉಕ್ಕಿ ಹರಿಯುತ್ತಿದೆ.
ಶಿಮ್ಲಾ ಜಿಲ್ಲೆಯ ರಾಮ್ಪುರ ವಿಭಾಗದಲ್ಲಿ ಮೇಘಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.
ಹಿಮಾಚಲ ಪ್ರದೇಶದ ಕುಲು, ಸೋಲನ್, ಸಿರ್ಮೌರ್, ಶಿಮ್ಲಾ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ದುರ್ಬಲ ಪ್ರದೇಶಗಳಲ್ಲಿ ಭೂಕುಸಿತಗಳು ಮತ್ತು ಪ್ರವಾಹದ ಬಗ್ಗೆ IMD ಎಚ್ಚರಿಕೆ ನೀಡಿತ್ತು. ತಗ್ಗು ಪ್ರದೇಶಗಳಲ್ಲಿನ ಕಚ್ಚಾ ಮನೆಗಳು ಮತ್ತು ತೋಟಗಳಿಗೆ ಬಲವಾದ ಗಾಳಿ ಮತ್ತು ನೀರಿನಿಂದ ಉಂಟಾಗುವ ಹಾನಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕುಲುವಿನಲ್ಲಿ ಉಕ್ಕಿ ಹರಿಯುತ್ತಿರುವ ಪಾರ್ವತಿ ನದಿಯಲ್ಲಿ ಕಟ್ಟಡವೊಂದು ಕುಸಿದು ಕೊಚ್ಚಿ ಹೋಗಿದೆ.