ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಗಾಲ್ಫ್ ವಿಭಾಗದ ಪಂದ್ಯ ಆಗಸ್ಟ್ 7 ರಿಂದ ಆರಂಭಗೊಳ್ಳುತ್ತಿದೆ. ಇದಕ್ಕೂ ಮುನ್ನ ಭಾರತೀಯ ಗಾಲ್ಫರ್ ದೀಕ್ಷಾ ದಾಗರ್ ಸಂಚರಿಸುತ್ತಿದ್ದ ಕಾರು ಪ್ಯಾರಿಸ್‌ನಲ್ಲಿ ಅಪಘಾತಕ್ಕೀಡಾಗಿದೆ.
ದೀಕ್ಷಾ, ಆಕೆಯ ತಂದೆ ತಾಯಿ ಹಾಗೂ ಸಹೋದರ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್ ಎಲ್ಲರೂ ಪಾರಾಗಿದ್ದಾರೆ. ದೀಕ್ಷಾ ತಾಯಿಗೆ ಗಾಯವಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.
ನಾಲ್ವರು ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ದೀಕ್ಷಾ ತಾಯಿಗೆ ಬೆನ್ನಿಗೆ ಗಾಯವಾಗಿದೆ. ಇನ್ನು ಸಹೋದರನಿಗೂ ಸಣ್ಣ ಪುಟ್ಟ ಗಾಯವಾಗಿದೆ. ಇಬ್ಬರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತ್ತ ದೀಕ್ಷಾ ಹಾಗೂ ದೀಕ್ಷಾ ತಂದೆಗೆ ಯಾವುದೇ ಗಾಯವಾಗಿಲ್ಲ. ಅಪಘಾತದಿಂದ ದೀಕ್ಷಾ ಕುಟುಂಬ ಆಘಾತಕ್ಕೀಡಾಗಿದೆ. ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಪಂದ್ಯಕ್ಕೆ ತಯಾರಿ ಆರಂಭಿಸಿದ್ದಾರೆ.
ಆಗಸ್ಟ್ 7ರಿಂದ ಗಾಲ್ಫ್ ಗೇಮ್ ನಡೆಯಲಿದೆ. ಮಹಿಳಾ ವಿಭಾಗದಲ್ಲಿ ದೀಕ್ಷಾ ದಾಗರ್ ಸ್ಪರ್ಧಿಸುತ್ತಿದ್ದರೆ, ಪುರುಷರ ವಿಭಾಗದಲ್ಲಿ ಶುಭಾಂಕರ್ ಶರ್ಮಾ ಹಾಗೂ ಗಗನಜೀತ್ ಭುಲ್ಲರ್ ಸ್ಪರ್ಧಿಸುತ್ತಿದ್ದಾರೆ.