ಹೇಗೆ ಮಾಡೋದು?
ಮೊದಲು ಕುಕ್ಕರ್‌ಗೆ ಎಣ್ಣೆ ಪಲಾವ್ ಎಲೆ, ಮರಾಠಿ ಮೊಗ್ಗು, ಈರುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಮಶ್ರೂಮ್ ಹಾಕಿ ಉಪ್ಪು, ಅರಿಶಿಣ ಹಾಕಿ ಮುಚ್ಚಿ ಬೇಯಿಸಿ
ನೀರು ಬಿಡುವವರೆಗೂ ಚೆನ್ನಾಗಿ ಬಾಡಿಸಿ, ಕಸೂರಿ ಮೇಥಿ ಹಾಕಿ.
ನಂತರ ಮಿಕ್ಸಿಗೆ ಚಕ್ಕೆ, ಲವಂಗ, ಈರುಳ್ಳಿ, ಹಸಿಮೆಣಸು, ಪುದೀನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿಕೊಳ್ಳಿ.
ನಂತರ ಟೊಮ್ಯಾಟೊ ಪ್ಯೂರಿ ಮಾಡಿಕೊಳ್ಳಿ.
ಇದೆಲ್ಲವನ್ನೂ ಮಶ್ರೂಮ್‌ಗೆ ಹಾಕಿ ಬಾಡಿಸಿ, ಎಣ್ಣೆ ಬಿಡುವವರೆಗೂ ಕಾಯಬೇಕು. ನಂತರ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರಿನಂತೆ, ಎಷ್ಟು ಬೇಕೋ ಅಷ್ಟು ನೀರು ಹಾಕಿ
ನೀರು ಕುದ್ದ ನಂತರ ಅಕ್ಕಿ ಹಾಕಿ, ಉಪ್ಪು ರುಚಿ ನೋಡಿ, ನಿಂಬೆರಸ ಹಾಕಿ ಎರಡು ವಿಶಲ್ ಹೊಡೆಸಿದ್ರೆ ಬಿರಿಯಾನಿ ರೆಡಿ