ದಿಗಂತ ವರದಿ ಹಾಸನ :
ಆಹಾರ ಅರಸಿ ಗ್ರಾಮದೊಳಗೆ ಎಂಟ್ರಿಕೊಟ್ಟ ಕಾಡಾನೆ ಮನೆಯ ಸುತ್ತಮುತ್ತ ಓಡಾಡಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಕೆರೋಡಿ ಗ್ರಾಮದಲ್ಲಿ ನಡೆದಿದೆ.
ಕಾಡಾನೆ ಬರುವ ಶಬ್ದ ಕೇಳುತ್ತಿದ್ದಂತೆ ನಾಯಿ ಬೊಗಳಿದ್ದು ಆದರೂ ಲೆಕ್ಕಿಸದೆ ತೋಟದೊಳಗೆ ತೆರಳಿ ಕಾಫಿ, ಬಾಳೆ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ತಿಂದು, ತುಳಿದು ಹಾಕಿದೆ. ಮನೆಯ ಗೇಟ್ ಮುರಿದು ಹಾಕಿರುವ ಕಾಡಾನೆ ಮೂರು ದಿನಗಳಿಂದ ಮನೆಯ ಸಮೀಪವೇ ಬಿಡುಬಿಟ್ಟಿದೆ.
ಸುಶೀಲಮ್ಮ-ಶಾಂತೇಗೌಡ ಎಂಬುವವರಿಗೆ ಸೇರಿದ ಮನೆ ಹಾಗೂ ತೋಟ ಇದಾಗಿದ್ದು ಜಮೀನು, ಕಾಫಿ ತೋಟಕ್ಕೆ ತೆರಳಲು ಭಯಪಡುವಂತಾಗಿದೆ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವಂತೆ ಆಗ್ರಹಿಸಿದ್ದಾರೆ.