ದಿಗಂತ ವರದಿ ಹಾಸನ :
ಹಾಸನ ಜಿಲ್ಲೆಯ ಕೆಲವೆಡೆ ಕೊಂಚ ಬಿಡುವು ನೀಡಿದ ಮಳೆ ನಡುವೆಯೂ ನದಿಯಿಂದ ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ರಾಜ್ಯ ಹೆದ್ದಾರಿ 277 ಕುಸಿದು ರಸ್ತೆ ಸಂಪರ್ಕ ಕಾಡಿತವಾಗಿರುವ ಘಟನೆ ಅರಕಲಗೂಡು ತಾಲ್ಲೂಕಿನ, ಕೊಣನೂರು ಹೋಬಳಿ, ಕೆರೆಕೋಡಿ ಗ್ರಾಮದ ಬಳಿ ನಡೆದಿದೆ.
ಕೊಣನೂರು-ಕೆರೆಕೋಡಿ ಗ್ರಾಮ, ಕೊಣನೂರು-ಮಡಿಕೇರಿ ನಡುವೆ ರಸ್ತೆ ಸಂಪರ್ಕ ಕಡಿತ ವಾಗಿದ್ದು ಕೆರೆ ಏರಿ ಕುಸಿತದಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು ಸ್ಥಳಕ್ಕೆ ಸ್ಥಳೀಯ ಶಾಸಕ ಎ.ಮಂಜು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎ.ಮಂಜು ಕೂಡಲೇ ದುರಸ್ತಿ ಕಾರ್ಯ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.