ದಿಗಂತ ವರದಿ ಕಾರವಾರ:
ಇಲ್ಲಿನ ಕೋಡಿಭಾಗ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಿ ನದಿಯ ಸೇತುವೆ ಕುಸಿತದಿಂದಾಗಿ ಲಾರಿ ನದಿಯಲ್ಲಿ ಬಿದ್ದು ಗಾಯಗೊಂಡ ಲಾರಿ ಚಾಲಕ ತಮಿಳುನಾಡು ರಾಜ್ಯದ ಧರ್ಮಪುರಿಯ ಬಾಲಮುರುಗನ್(37) ಎಂದು ತಿಳಿದು ಬಂದಿದೆ.
ಕಾಳಿ ಸೇತುವೆ ಮೂರು ಕಡೆಗಳಲ್ಲಿ ಮುರಿದು ನದಿಗೆ ಬಿದ್ದಿದ್ದು ಈ ಸಂದರ್ಭದಲ್ಲಿ ಸೇತುವೆ ಮೇಲಿಂದ ಕಾರವಾರ ಕಡೆ ಬರುತ್ತಿದ್ದ ಲಾರಿ ನದಿಯಲ್ಲಿ ಬಿದ್ದಿದೆ.
ಪೊಲೀಸರು ಈ ಕುರಿತು ತಕ್ಷಣ ಕಂಟ್ರೋಲ್ ರೂಮಿಗೆ ಮಾಹಿತಿ ರವಾನಿಸಿದ್ದರಿಂದ ಸ್ಥಳೀಯ ಮೀನುಗಾರರ ಸಹಾಯದಿಂದ ಲಾರಿ ಚಾಲಕನ್ನನ್ನು ರಕ್ಷಿಸಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂದಿನ ಆದೇಶ ಬರುವ ವರೆಗೆ ಕೋಡಿಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲ್ಲಿಸಿ ಬದಲಿ ಮಾರ್ಗ ಸೂಚಿಸಲಾಗಿದ್ದು ಗೋವಾ ಮಂಗಳೂರು ಕಡೆ ಹೋಗಿ ಬರುವ ಪ್ರಯಾಣಿಕರು ವಾಹನ ಚಾಲಕರು ಈ ಕುರಿತು ಗಮನ ಹರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಅವರು ತಿಳಿಸಿದ್ದಾರೆ.