ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷ ಕಂಡ ಹಿನ್ನೆಲೆ ಬಿಲ್ಲಿಂಗ್ಸ್ ನಗರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಲಾಗಿದೆ.
ತಾಂತ್ರಿಕ ತೊಂದರೆಗಳಿಂದ ವಿಮಾನ ಮಾರ್ಗವನ್ನು ಬದಲಾಯಿಸಲಾಗಿದೆ. ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಮೌಂಟಾನದ ಭೋಝ್ ಮನ್ ಗೆ ಹೋಗಬೇಕಿತ್ತು. ತಾಂತ್ರಿಕ ತೊಂದರೆಯಿಂದ ವಿಮಾನ ಬಿಲ್ಲಿಂಗ್ಸ್ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಅಧ್ಯಕ್ಷ ಟ್ರಂಪ್ ಅವರ ವಿಮಾನವು ಲ್ಯಾಂಡಿಂಗ್ ಮೊದಲು ಯಾಂತ್ರಿಕ ಸಮಸ್ಯೆ ಉಂಟಾಗಿತ್ತು. ಯಾವುದೇ ಭದ್ರತಾ ಸಮಸ್ಯೆಗಳು ಒಳಗೊಂಡಿಲ್ಲ ಎಂದು ರಹಸ್ಯ ಸೇವೆ ತಿಳಿಸಿದೆ.